Job Description: * 2021 ರ ಆಗಸ್ಟ್ 31 ರಂದು ಅಫ್ಘಾನಿಸ್ತಾನದಲ್ಲಿ ತನ್ನ 20 ವರ್ಷಗಳ ಯುದ್ಧದ ಅಂತ್ಯವನ್ನು ಯುನೈಟೆಡ್ ಸ್ಟೇಟ್ಸ್ ಘೋಷಣೆ ಮಾಡಿ ತನ್ನ ಸೇನೆಯನ್ನು ಮರಳಿ ಕರೆಸಿಕೊಂಡಿದೆ. * ಈ ಮೊದಲು ಅಮೇರಿಕ ಸೇನೆಯು ಇದೇ ಆಗಸ್ಟ್ 31 ರೊಳಗೆ ಅಫ್ಘಾನಿಸ್ತಾನ ರಾಷ್ಟ್ರವನ್ನು ತೊರೆಯಲಿದೆ ಎಂದು ಅಮೇರಿಕ ತಿಳಿಸಿತ್ತು, ಅದರಂತೆಯೇ ಇದೀಗ ಅಮೇರಿಕದ ಕೊನೆಯ ಮಿಲಿಟರಿ ವಿಮಾನ ಕಾಬೂಲ್ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೊರೆದಿದೆ. * ಅಲ್ ಖೈದಾ ಭಯೋತ್ಪಾದಕರು ಸೆಪ್ಟೆಂಬರ್ 9/11 ರ 20 ನೇ ವಾರ್ಷಿಕೋತ್ಸವದ ಮೊದಲು ನ್ಯೂಯಾರ್ಕ್ ನಲ್ಲಿ ನ ಅವಳಿ ಗೋಪುರಗಳನ್ನು ಹೊಡೆದಉರುಳಿಸಿದರು. * ಈ ಭಯೋತ್ಪಾದಕ ದಾಳಿಯಿಂದಾಗಿ ಅಮೇರಿಕ ಅಫ್ಘಾನಿಸ್ತಾನಕ್ಕೆ ಪ್ರವೇಶ ಮಾಡಿತು, ಹಾಗೂ ತಾಲಿಬಾನ್ ಆಡಳಿತವನ್ನು ಉರುಳಿಸಲು ಸಿದ್ದವಾಯಿತು. * ಪ್ರಸ್ತುತ 2001 ರಿಂದ 2021 ರವರೆಗೆ ಅಫ್ಘಾನಿಸ್ತಾನದಲ್ಲಿ ನಡೆದ ಸಂಘರ್ಷಗಳು: ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನ ಇಸ್ಲಾಮಿಕ್ ಎಮಿರೇಟ್ ನ್ನು ಹೊಡೆದ ಉರುಳಿಸಲು ಯುನೈಟೆಡ್ ಸ್ಟೇಟ್ಸ್ ಹಾಗೂ ಮಿತ್ರರಾಷ್ಟ್ರ ಆಕ್ರಮಣದಿಂದ ಈ ಯುದ್ಧ ಆರಂಭಗೊಂಡಿದೆ. * ತಾಲಿಬಾನ್ ದಂಗೆಕೋರರ ವಿರುದ್ಧ ಮಿತ್ರರಾಷ್ಟ್ರವಾದ ನ್ಯಾಟೋ ಮತ್ತು ಅಫ್ಘಾನ್ ಸಶಸ್ತ್ರ ಪಡೆಗಳು ಅಧಿಕೃತವಾಗಿ ಯುದ್ಧವನ್ನು ನಡೆಸಿದವು, ಆದರೆ ಈ ಯುದ್ಧದಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ಸೈನ್ಯವನ್ನು ಸೋಲಿಸಿತು, ಹಾಗೂ ಇದುವೇ ಯುನೈಟೆಡ್ ಸ್ಟೇಟ್ಸ್ ಇತಿಹಾಸದಲ್ಲಿ ಸುದೀರ್ಘ ಯುದ್ಧವಾಗಿದೆ.