Job Description: ➤ ಕೇಂದ್ರ ಸರ್ಕಾರದ ಹೊಸ ವಕ್ಫ್ ತಿದ್ದುಪಡಿ ಕಾಯ್ದೆಯ ಅನ್ವಯ ತನ್ನ ರಾಜ್ಯದ ವಕ್ಫ್ ಮಂಡಳಿಯನ್ನು (Waqf Board) ಯಶಸ್ವಿಯಾಗಿ ಮರುರಚಿಸಿದ ದೇಶದ ಅತ್ಯಂತ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮಧ್ಯಪ್ರದೇಶ ಪಾತ್ರವಾಗಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ಅವರ ವಿಶೇಷ ಆಸಕ್ತಿ ಹಾಗೂ ನಿರ್ಧಾರದ ಮೇರೆಗೆ ಈ ಐತಿಹಾಸಿಕ ಮರುರಚನೆ ನಡೆದಿದ್ದು, ಈ ಕುರಿತು ಮಧ್ಯಪ್ರದೇಶದ ಅಧಿಕೃತ ಗೆಜೆಟ್‌ನಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಕಾಯ್ದೆಯ ಅನ್ವಯ ರಚನೆ: ವಕ್ಫ್ ಕಾಯ್ದೆ 1995ರ (2025ರ ತಿದ್ದುಪಡಿ ಕಾಯ್ದೆ) ಸೆಕ್ಷನ್ 13(1) ಮತ್ತು ಸೆಕ್ಷನ್ 14ರ ಅಡಿಯಲ್ಲಿ ಈ ನೂತನ ವಕ್ಫ್ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಅಧ್ಯಕ್ಷರ ನೇಮಕ: ಬಿಜೆಪಿ ನಾಯಕ ಸನ್ವರ್ ಪಟೇಲ್ ಅವರನ್ನು ಈ ನೂತನ ವಕ್ಫ್ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಒಟ್ಟು ಸದಸ್ಯರು: ನೂತನ ಮಂಡಳಿಯು ಒಟ್ಟು 10 ಸದಸ್ಯರನ್ನು ಒಳಗೊಂಡಿದೆ. ಇದರಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಮಿಷನರ್ ಪದನಿಮಿತ್ತ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ➤ ಇತಿಹಾಸದಲ್ಲೇ ಮೊದಲು: ಇಬ್ಬರು ಹಿಂದೂ ಸದಸ್ಯರ ಸೇರ್ಪಡೆ: ಹೊಸ ತಿದ್ದುಪಡಿ ಕಾಯ್ದೆಯ ಪ್ರಮುಖ ನಿಯಮದಂತೆ, ವಕ್ಸ್ ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರಿಗೂ ಅವಕಾಶ ಕಲ್ಪಿಸಲಾಗಿದೆ. ಇದರ ಅನ್ವಯ ಮಧ್ಯಪ್ರದೇಶ ಸರ್ಕಾರವು ದೇಶದಲ್ಲೇ ಮೊದಲ ಬಾರಿಗೆ ವಕ್ಸ್ ಮಂಡಳಿಗೆ ಇಬ್ಬರು ಹಿಂದೂ ಸದಸ್ಯರನ್ನು ನೇಮಿಸಿದೆ. ಮನೋಜ್ ಮಾಲ್ಪಾನಿ (ಇಂದೋರ್) ಅನಿಮೇಶ್ ಭಾರ್ಗವ (ಗುಣ ಜಿಲ್ಲೆಯ ರಾಘೋಘರ್) ಇವರೊಂದಿಗೆ ಮಾಜಿ ಕೇಂದ್ರ ಸಚಿವೆ ನಜ್ಮಾ ಹೆಪ್ತುಲ್ಲಾ, ಕಾಂಗ್ರೆಸ್ ಶಾಸಕ ಅತೀಫ್ ಅಖೀಲ್ ಸೇರಿದಂತೆ ಪ್ರಮುಖರು ಹಾಗೂ ಮಹಿಳಾ ಪ್ರತಿನಿಧಿಗಳಾಗಿ ಫಾತಿಮಾ ಚೌಧರಿ ಮತ್ತು ಶಾಯಿಸ್ತಾ ಸುಲ್ತಾನ್ ಅವರನ್ನೂ ಮಂಡಳಿಗೆ ಸೇರಿಸಿಕೊಳ್ಳಲಾಗಿದೆ.➤ ವಕ್ಫ್ ತಿದ್ದುಪಡಿ ಕಾಯ್ದೆ 2025: ಕೇಂದ್ರ ಸರ್ಕಾರವು ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ತರುವ ಉದ್ದೇಶದಿಂದ ಹಳೆಯ ಕಾಯ್ದೆಗೆ ವ್ಯಾಪಕ ತಿದ್ದುಪಡಿ ತಂದಿತ್ತು. ಸಂಸತ್ತಿನ ಉಭಯ ಸದನಗಳಲ್ಲಿ ಸುದೀರ್ಘ ಚರ್ಚೆಯ ನಂತರ ಅಂಗೀಕಾರವಾಗಿದ್ದ ಈ ಬಿಲ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏಪ್ರಿಲ್ 5, 2025 ರಂದು ಅಂಕಿತ ಹಾಕಿದ್ದರು. ಈ ಕಾಯ್ದೆಯ ಪ್ರಮುಖ ಅಂಶವೆಂದರೆ ಪ್ರತಿ ರಾಜ್ಯದ ವಕ್ಸ್ ಮಂಡಳಿಯಲ್ಲಿ ಕನಿಷ್ಠ ಇಬ್ಬರು ಮುಸ್ಲಿಮೇತರ ತಜ್ಞರು ಮತ್ತು ಮಹಿಳೆಯರಿಗೆ ಕಡ್ಡಾಯ ಪ್ರಾತಿನಿಧ್ಯ ಇರಬೇಕು ಎನ್ನುವುದಾಗಿದೆ. ಇದೀಗ ಮಧ್ಯಪ್ರದೇಶ ಈ ನಿಯಮವನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿದೆ.