Job Description: ➤ ರಾಜ್ಯದಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆಯ ಕಠಿಣ ನಿಯಮಗಳು ಹಾಗೂ ಅನುಮತಿ ಸಿಗದ ಕಾರಣ ನೂರಾರು ಕಿರು ಜಲವಿದ್ಯುತ್ ಯೋಜನೆಗಳು (Small Hydro Projects) ರದ್ದಾಗಿವೆ. ಆದಾಗ್ಯೂ, ಒಟ್ಟು ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಕರ್ನಾಟಕ ಇಡೀ ದೇಶದಲ್ಲೇ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.➤ ಳೆದ 2010 ರಿಂದ 2025ರ ಮೇ 31ರವರೆಗೆ ಕರ್ನಾಟಕದಲ್ಲಿ ಹಂಚಿಕೆಯಾಗಿದ್ದ ಒಟ್ಟು 519 ಕಿರು ಜಲವಿದ್ಯುತ್ ಯೋಜನೆಗಳ ಪೈಕಿ ಬರೋಬ್ಬರಿ 386 ಯೋಜನೆಗಳನ್ನು ಬಂದ್ ಮಾಡಲಾಗಿದೆ ಎಂದು ಕ್ರಿಡೆಲ್ (KREDL) ವರದಿ ತಿಳಿಸಿದೆ. ಅಂದರೆ ಹಂಚಿಕೆಯಾದ ಸುಮಾರು ನಾಲ್ಕರಲ್ಲಿ ಮೂರು ಭಾಗದಷ್ಟು ಯೋಜನೆಗಳು ಕಾರ್ಯಾರಂಭದ ಹಂತವನ್ನೇ ತಲುಪಿಲ್ಲ.➤ ಕಳೆದ 2022-23ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಂಚಿಕೆಯಾಗಿದ್ದ 225 ಯೋಜನೆಗಳ ಪೈಕಿ ದಾಖಲೆಯ 220 ಯೋಜನೆಗಳು ರದ್ದಾಗಿರುವುದು ಗಮನಾರ್ಹ ಸಂಗತಿಯಾಗಿದೆ.➤ ಈ ಕಿರು ಜಲವಿದ್ಯುತ್ ಯೋಜನೆಗಳನ್ನು ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳು ಹಾಗೂ ದಟ್ಟ ಅರಣ್ಯ ಪ್ರದೇಶಗಳ ಹರಿಯುವ ನೀರಿನ ಮೂಲಗಳ ಬಳಿ ಸ್ಥಾಪಿಸಲಾಗುತ್ತದೆ. ಆದರೆ, ಸೂಕ್ಷ್ಮ ಪರಿಸರ ವಲಯಗಳಾಗಿರುವುದರಿಂದ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಗ್ರೀನ್ ಸಿಗ್ನಲ್ ಪಡೆಯುವುದು ಖಾಸಗಿ ಕಂಪನಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.➤ ಇಷ್ಟೊಂದು ಯೋಜನೆಗಳು ರದ್ದಾಗಿದ್ದರೂ ಸಹ, ಕಿರು ಜಲವಿದ್ಯುತ್ ಕ್ಷೇತ್ರದಲ್ಲಿ ಒಟ್ಟು 1,284 ಮೆಗಾವಾಟ್ (MW) ಸ್ಥಾಪಿತ ಉತ್ಪಾದನಾ ಸಾಮರ್ಥ್ಯ ಹೊಂದುವ ಮೂಲಕ ಕರ್ನಾಟಕ ಇಂದಿಗೂ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ