Job Description: ➤ ಭಾರತದ ಬಾಹ್ಯಾಕಾಶ ರಂಗದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಲು ವೇದಿಕೆ ಸಿದ್ಧವಾಗಿದೆ. ದೇಶದ ಪ್ರಥಮ ಖಾಸಗಿ ಕಕ್ಷೀಯ ಶ್ರೇಣಿಯ (Orbital Class) ರಾಕೆಟ್ 'ವಿಕ್ರಮ್-1' (Vikram-1) ಮೊದಲ ಪ್ರಾಯೋಗಿಕ ಉಡಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.➤ ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆಯಾದ 'ಸ್ಕೈರೂಟ್ ಏರೋಸ್ಪೇಸ್' (Skyroot Aerospace) ಈ ಅತ್ಯಾಧುನಿಕ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದೆ.➤ ಜುಲೈ 12 ರಿಂದ ಆಗಸ್ಟ್ 4 ರ ನಡುವಿನ ಅವಧಿಯಲ್ಲಿ ಈ ರಾಕೆಟ್‌ನ ಮೊದಲ ಪ್ರಾಯೋಗಿಕ ಉಡಾವಣೆ ನಡೆಯಲಿದೆ. ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಲ್ಲಿ ರಾಕೆಟ್ ವಾಹಕದ ಜೋಡಣೆ, ಹವಾಮಾನ ಮತ್ತು ಸುರಕ್ಷತಾ ಪರೀಕ್ಷೆಗಳ ನಂತರ ಅಂತಿಮ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಸ್ಕೈರೂಟ್ ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಸಿಇಒ ಪವನ್ ಕುಮಾರ್ ಚಂದನ ತಿಳಿಸಿದ್ದಾರೆ.➤ ಇದು ಭೂಮಿಯ ಗುರುತ್ವಾಕರ್ಷಣೆಯನ್ನು ಮೀರಿ ನಿಗದಿತ ಕಕ್ಷೆ ತಲುಪಬಲ್ಲ ಸಾಮರ್ಥ್ಯ ಹೊಂದಿದೆ. ಭೂಮಿಯ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಂಡು ಹೋಗಲು ಈ ಕಕ್ಷೀಯ ಶ್ರೇಣಿಯ ರಾಕೆಟ್ ಸೆಕೆಂಡ್‌ಗೆ ಕನಿಷ್ಠ 7.8 ಕಿ.ಮೀ. ವೇಗದಲ್ಲಿ ಚಲಿಸಬೇಕಾಗುತ್ತದೆ.➤ ಇಸ್ರೋ (ISRO) ಮಾತ್ರವಲ್ಲದೆ ಭಾರತದ ಖಾಸಗಿ ವಲಯವೂ ಬಾಹ್ಯಾಕಾಶ ರಂಗದಲ್ಲಿ ಜಾಗತಿಕ ಮಟ್ಟದಲ್ಲಿ ಪೈಪೋಟಿ ನೀಡಲು ಈ ಉಡಾವಣೆ ದಾರಿಯಾಗಲಿದೆ.KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ