Job Description: ➤ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯು ಚಾರಿತ್ರಿಕ ಕ್ಷಣವೊಂದಕ್ಕೆ ಸಾಕ್ಷಿಯಾಗಲಿದೆ. ಈ ಬಾರಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸುವ ಮುನ್ನ, ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಪ್ರಮುಖ ಆಕರ್ಷಣೆಯಾಗಿ ಮೊಳಗಲಿದೆ. ದೇಶಭಕ್ತಿ ಗೀತೆಗೆ 150 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ವಿಶೇಷ ಗೌರವ ಅರ್ಪಿಸಲು ಕೇಂದ್ರ ರಕ್ಷಣಾ ಸಚಿವಾಲಯ ನಿರ್ಧರಿಸಿದೆ. 150 ವರ್ಷಗಳ ಇತಿಹಾಸ: ಬಂಕಿಮಚಂದ್ರ ಚಟ್ಟೋಪಾಧ್ಯಾಯರಿಂದ ರಚಿತವಾದ 'ವಂದೇ ಮಾತರಂ' ಗೀತೆಗೆ 150 ವರ್ಷ ತುಂಬಿದ ನೆನಪಿನಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವದ ಪ್ರಮುಖ ಥೀಮ್ ಆಗಿ ಗೀತೆಯನ್ನು ಆಯ್ಕೆ ಮಾಡಲಾಗಿದೆ. ಆರೂ ಚರಣಗಳ ಗಾಯನ: ಸಾರ್ವಜನಿಕ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುತ್ತಿತ್ತು. ಆದರೆ ಈ ಬಾರಿ ಗೀತೆಯ ಎಲ್ಲಾ ಆರೂ ಚರಣಗಳನ್ನು ಹಾಡುವ ವ್ಯವಸ್ಥೆ ಮಾಡಲಾಗಿದೆ. ಜ್ಞಾನಪಥದಲ್ಲಿ 'ವಂದೇ ಮಾತರಂ' ರಚನೆ: ಎನ್‌ಸಿಸಿ (NCC) ಕೆಡೆಟ್‌ಗಳು ಹಾಗೂ 'ಮೈ ಭಾರತ್' (MY Bharat) ಸ್ವಯಂಸೇವಕರು ಸೇರಿ ರ‍್ಯಾಂಪಾರ್ಟ್ ಎದುರಿನ ಜ್ಞಾನಪಥದಲ್ಲಿ ಮಾನವ ಶೃಂಗಾರದ ಮೂಲಕ 'ವಂದೇ ಮಾತರಂ' ಅಕ್ಷರ ವಿನ್ಯಾಸ ಮೂಡಿಸಲಿದ್ದಾರೆ. ವೈಮಾನಿಕ ಗೌರವ: ಭಾರತೀಯ ವಾಯುಪಡೆಯ Mi-17 ಹೆಲಿಕಾಪ್ಟರ್ 'ವಂದೇ ಮಾತರಂ' ಬ್ಯಾನರ್ ಹೊತ್ತು ಸಾಗಲಿದ್ದು, ಕಾರ್ಯಕ್ರಮದ ಸಭಿಕರ ಮೇಲೆ ಪುಷ್ಪವೃಷ್ಟಿ ಕರೆಯಲಿದೆ. ➤ ಕಾರ್ಯಕ್ರಮದ ರೂಪುರೇಷೆ ಹಾಗೂ ಹಂತಗಳು: ಆಗಮನ ಹಾಗೂ 'ವಂದೇ ಮಾತರಂ': ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಗೆ ಆಗಮಿಸುತ್ತಿದ್ದಂತೆ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಮೊಳಗಲಿದೆ. ಈ ವೇಳೆ ಸಭೆಯಲ್ಲಿರುವ ಪ್ರತಿಯೊಬ್ಬರೂ ಎದ್ದುನಿಂತು ಗೌರವ ಸೂಚಿಸುವುದು ಕಡ್ಡಾಯವಾಗಿದೆ. ಧ್ವಜಾರೋಹಣ ಮತ್ತು ರಾಷ್ಟ್ರಗೀತೆ: ವಂದೇ ಮಾತರಂ ಗಾಯನದ ನಂತರ ಪ್ರಧಾನಿಯವರಿಂದ ತ್ರಿವರ್ಣ ಧ್ವಜಾರೋಹಣ ನಡೆಯಲಿದ್ದು, ರಾಷ್ಟ್ರಗೀತೆ 'ಜನ ಗಣ ಮನ' ನುಡಿಸಲಾಗುವುದು. ಪ್ರಧಾನಿ ಭಾಷಣ: ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಸುದೀರ್ಘ ಸಂದೇಶ ನೀಡಲಿದ್ದಾರೆ. ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ: ಸಶಸ್ತ್ರ ಪಡೆಗಳು, ದೆಹಲಿ ಪೊಲೀಸ್ ತುಕಡಿಗಳ ಪಥಸಂಚಲನ ಮತ್ತು ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಪ್ರದರ್ಶನ ಜರುಗಲಿದೆ. ➤ ಆಹ್ವಾನ ಪತ್ರಿಕೆಯಲ್ಲಿ 'ವಂದೇ ಮಾತರಂ' ಸಾಲುಗಳು: ಕೇಂದ್ರ ರಕ್ಷಣಾ ಸಚಿವಾಲಯ ಮುದ್ರಿಸಿರುವ ಸ್ವಾತಂತ್ರ್ಯ ದಿನಾಚರಣೆಯ ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ ಆರೂ ಚರಣಗಳನ್ನು ಮುದ್ರಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಸಾರ್ವಜನಿಕರು ರಾಷ್ಟ್ರೀಯ ಗೀತೆಯನ್ನು ಸುಲಭವಾಗಿ ಜೊತೆಯಲ್ಲಿ ಹಾಡಲು ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ.