Job Description: ➤ ಭಾರತದಲ್ಲಿ ಯುಪಿಐ (Unified Payments Interface) ಬಳಕೆದಾರರಿಗೆ ಡಿಜಿಟಲ್ ಪಾವತಿಗಳ ಮೇಲಿನ ಶುಲ್ಕದ ಕುರಿತು ಹರಡಿದ್ದ ಗೊಂದಲಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ತೆರೆ ಎಳೆದಿದೆ. ಸಾಮಾನ್ಯ ಬಳಕೆದಾರರಿಗೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ (P2P - Person to Person) ನಡೆಯುವ ಯುಪಿಐ ವಹಿವಾಟುಗಳು ಸಂಪೂರ್ಣ ಉಚಿತವಾಗಿರಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಯೊಂದರ ನಂತರ ಶುಲ್ಕ ವಿಧಿಸಲಾಗುತ್ತದೆ ಎಂಬ ವದಂತಿಗಳು ಎದ್ದಿದ್ದವು. ➤ ಇತ್ತೀಚೆಗೆ ಲೋಕಸಭೆಯಲ್ಲಿ ತೆರಿಗೆ ಮತ್ತು ಇತರೆ ಕಾನೂನುಗಳ (ತಿದ್ದುಪಡಿ) ಮಸೂದೆ, 2026 ಅನ್ನು ಮಂಡಿಸಲಾಗಿತ್ತು. ಈ ಮಸೂದೆಯಲ್ಲಿ ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ (PSS Act, 2007) ಗೆ ತಿದ್ದುಪಡಿ ಪ್ರಸ್ತಾವಿಸಲಾಗಿದ್ದು, ಇದರಿಂದ ಯುಪಿಐ ಉಚಿತ ಸೇವೆಗೆ ಕಳಚು ಬೀಳಲಿದೆ ಎಂಬ ವರದಿಗಳು ಹರಿದಾಡಿದ್ದವು.ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ: ಯುಪಿಐ ತಂತ್ರಜ್ಞಾನ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು, ಸೈಬರ್ ಭದ್ರತೆ ಹೆಚ್ಚಿಸಲು ಮತ್ತು ಮೂಲಸೌಕರ್ಯ ಸುಧಾರಿಸಲು ಈ ತಿದ್ದುಪಡಿ ಮಾಡಲಾಗಿದೆಯೇ ಹೊರತು ಸಾಮಾನ್ಯ ಜನರಿಗೆ ಹೊರೆಯಾಗಿಸಲು ಅಲ್ಲ. ಬ್ಯಾಂಕುಗಳು ಮತ್ತು ಪಾವತಿ ಸೇವಾ ಪೂರೈಕೆದಾರರಿಗೆ (PSPs) ಸುಸ್ಥಿರ ಆದಾಯ ಮಾದರಿ (Sustainable Revenue Model) ರೂಪಿಸಲು ಈ ತಿದ್ದುಪಡಿ ಸಹಾಯ ಮಾಡಲಿದೆ. ಭಾರತದಲ್ಲಿ ಉಚಿತ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮುಂದುವರಿಸಲಾಗುತ್ತಿದ್ದು, ಬಾಹ್ಯ ಒತ್ತಡದಿಂದ ನಿಯಮ ಬದಲಾಯಿಸಲಾಗುತ್ತಿದೆ ಎಂಬ ಆರೋಪಗಳನ್ನು ಸರ್ಕಾರ ಸಂಪೂರ್ಣವಾಗಿ ತಳ್ಳುಹಾಕಿದೆ. ➤ ಯುಪಿಐ (UPI) ಅಂಕಿ-ಅಂಶಗಳು: ವಿಶ್ವದ ಅತಿದೊಡ್ಡ ರಿಯಲ್-ಟೈಮ್ ಪಾವತಿ ವ್ಯವಸ್ಥೆ: ಯುಪಿಐ ಪ್ರಸ್ತುತ ಜಗತ್ತಿನ ಅತಿ ದೊಡ್ಡ ರಿಯಲ್-ಟೈಮ್ ಇಂಟರ್‌ಆಪರೇಬಲ್ ಪಾವತಿ ವ್ಯವಸ್ಥೆಯಾಗಿದೆ. ಜುಲೈ 2026 ವಹಿವಾಟು ಸಾಧನೆ: ಜುಲೈ 2026 ರ ಒಂದೇ ತಿಂಗಳಲ್ಲಿ ಯುಪಿಐ ಮೂಲಕ 2,366 ಕೋಟಿಗಿಂತಲೂ ಹೆಚ್ಚು ವಹಿವಾಟುಗಳು ನಡೆದಿದ್ದು, ಇದರ ಒಟ್ಟು ಮೌಲ್ಯ ₹29.9 ಲಕ್ಷ ಕೋಟಿ ಆಗಿದೆ. ಜಾಗತಿಕ ವಿಸ್ತರಣೆ: ಯುಪಿಐ ವ್ಯವಸ್ಥೆಯು ಪ್ರಸ್ತುತ ಜಗತ್ತಿನ 11 ದೇಶಗಳಲ್ಲಿ ಕಾರ್ಯಾಚರಣೆಯಲ್ಲಿದೆ. ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ