Job Description: ➤ ಟಾಟಾ ಸಮೂಹದ ಪ್ರಮುಖ ಹಿಡುವಳಿ ಕಂಪನಿಯಾದ (Holding Company) ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ಅವರು ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ. ಎನ್. ಚಂದ್ರಶೇಖರನ್ ಅವರಿಗೆ ಮುಂದಿನ 5 ವರ್ಷಗಳ ಕಾಲ (2027 ರಿಂದ 2032) ಅಧಿಕಾರಾವಧಿ ವಿಸ್ತರಿಸಲು ಸರ್ ದೊರಾಬ್‌ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಶಿಫಾರಸು ಮಾಡಿದ್ದವು. ಆದರೆ, ಟಾಟಾ ಸನ್ಸ್ ಮಂಡಳಿಯ ಸಭೆಯಲ್ಲಿ (Board Meeting) ಎಲ್ಲ ನಿರ್ದೇಶಕರಿಂದ ಸರ್ವಾನುಮತದ ಬೆಂಬಲ (Unanimous Support) ಸಿಗದ ಕಾರಣ, ಅವರು ಸ್ವತಃ ಮರುನೇಮಕಾತಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಸಂಸ್ಥೆಯ ಸುಗಮ ಆಡಳಿತ ಮತ್ತು ಭವಿಷ್ಯದ ಕಾರ್ಯತಂತ್ರಗಳ ಸ್ಪಷ್ಟತೆಗಾಗಿ ಹೊಸ ನಾಯಕನ ಆಯ್ಕೆಗೆ ಮಂಡಳಿಗೆ ವಿನಂತಿಸಿದ್ದಾರೆ. ➤ ಎನ್. ಚಂದ್ರಶೇಖರನ್: ಆರಂಭಿಕ ಜೀವನ: ತಮಿಳುನಾಡಿನ ಮೋಹನೂರಿನಲ್ಲಿ ಜನಿಸಿದ ಇವರು, ತಿರುಚಿರಾಪಳ್ಳಿಯ ಎನ್‌ಐಟಿಯಲ್ಲಿ (NIT Trichy) MCA ಪದವಿ ಪಡೆದರು. TCS ಸೇರ್ಪಡೆ (1987): ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಗೆ ಸಾಫ್ಟ್‌ವೇರ್ ಪ್ರೋಗ್ರಾಮರ್ / ಟ್ರೇನಿಯಾಗಿ ಸೇರಿದರು. TCS ಸಿಇಒ (2009): ತಮ್ಮ ಕಾರ್ಯಕ್ಷಮತೆಯಿಂದ 2009ರಲ್ಲಿ TCS ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO & MD) ಆಯ್ಕೆಯಾದರು. ಟಾಟಾ ಸನ್ಸ್ ಅಧ್ಯಕ್ಷ (2017): ಸೈರಸ್ ಮಿಸ್ಟ್ರಿ ಅವರ ನಿರ್ಗಮನದ ನಂತರ, 2017ರ ಜನವರಿಯಲ್ಲಿ ಟಾಟಾ ಸನ್ಸ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ➤ ಚಂದ್ರಶೇಖರನ್ ಅವರ ಅವಧಿಯಲ್ಲಿ ಟಾಟಾ ಗ್ರೂಪ್ ಸಾಧನೆಗಳು: ಏರ್ ಇಂಡಿಯಾ ಖರೀದಿ (Air India Acquisition): 2022 ರಲ್ಲಿ ಕೇಂದ್ರ ಸರ್ಕಾರದಿಂದ 'ಏರ್ ಇಂಡಿಯಾ' ವಿಮಾನಯಾನ ಸಂಸ್ಥೆಯನ್ನು ಮರಳಿ ಟಾಟಾ ಸಮೂಹಕ್ಕೆ ಸೇರಿಸಿದ್ದು ಇವರ ಪ್ರಮುಖ ಸಾಧನೆ. (ವಿಸ್ತಾರ ಹಾಗೂ ಏರ್ ಇಂಡಿಯಾ ವಿಲೀನಪ್ರಕ್ರಿಯೆ). ಸೆಮಿಕಂಡಕ್ಟರ್ ಮತ್ತು ಬ್ಯಾಟರಿ ಗಿಗಾಫ್ಯಾಕ್ಟರಿ: ಭಾರತದಲ್ಲಿ ಚಿಪ್ ತಯಾರಿಕೆ (Semiconductor) ಹಾಗೂ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆ. ಟಾಟಾ ನ್ಯೂ (Tata Neu): ಡಿಜಿಟಲ್ ಕ್ಷೇತ್ರದಲ್ಲಿ ಟಾಟಾ ಸಮೂಹದ ಸೂಪರ್ ಆಪ್ 'Tata Neu' ಬಿಡುಗಡೆ. ವ್ಯಾಪಾರ ಮರುಸಂಘಟನೆ: ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ರಚನೆ ಹಾಗೂ ಟಾಟಾ ಮೋಟಾರ್ಸ್ ಸಂಸ್ಥೆಯ ವಿಭಾಗೀಕರಣ ಪ್ರಕ್ರಿಯೆಗಳು.