Job Description: ➤ ಭಾರತ ಮತ್ತು ಅಮೆರಿಕ ನಡುವೆ ಬಾಹ್ಯಾಕಾಶ ವಿಜ್ಞಾನ, ಉಪಗ್ರಹ ತಂತ್ರಜ್ಞಾನ ಹಾಗೂ ಮಾನವ ಸಹಿತ ಬಾಹ್ಯಾಕಾಶ ಯಾನ ಕ್ಷೇತ್ರದಲ್ಲಿ ಸಹಕಾರ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ವಿಶ್ವ ಬಾಹ್ಯಾಕಾಶ ರಂಗದಲ್ಲಿ ಭಾರತದ ಹಿರಿಮೆ ಮತ್ತಷ್ಟು ಹೆಚ್ಚಾಗಿದೆ. ಆಗಸ್ಟ್ 5 ಮತ್ತು 6 ರಂದು ಬೆಂಗಳೂರಿನ ಇಸ್ರೋ ಪ್ರಧಾನ ಕಚೇರಿಯಲ್ಲಿ 'ಭಾರತ-ಅಮೆರಿಕ ನಾಗರಿಕ ಬಾಹ್ಯಾಕಾಶ ಜಂಟಿ ಕಾರ್ಯಪಡೆ' (CSJWG) ಸಭೆ ನಡೆಯಿತು. ಈ ಸಭೆಯಲ್ಲಿ ಯುಎಸ್ ರಾಯಭಾರ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ನಾಸಾ ಇಸ್ರೋವನ್ನು ತನ್ನ ಮಹತ್ವಾಕಾಂಕ್ಷೆಯ 'ಮೂನ್‌ಬೇಸ್' ಯೋಜನೆಗೆ ಜೊತೆಯಾಗುವಂತೆ ಆಹ್ವಾನಿಸಿದೆ.➤ ಈ ಉನ್ನತ ಮಟ್ಟದ ಸಭೆಯನ್ನು ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ. ವಿ. ನಾರಾಯಣನ್ ಹಾಗೂ ಭಾರತದಲ್ಲಿನ ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಅವರು ಆರಂಭಿಸಿದರು. ಜಂಟಿ ಸಭೆಯ ಅಧ್ಯಕ್ಷತೆಯನ್ನು ಯು.ಆರ್. ರಾವ್ ಉಪಗ್ರಹ ಕೇಂದ್ರದ (URSC) ನಿರ್ದೇಶಕ ಎಂ. ಶಂಕರನ್ ಮತ್ತು ನಾಸಾ ಹಾಗೂ ಅಮೆರಿಕ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಗಳು ವಹಿಸಿದ್ದರು.➤ ನಾಸಾದ 'ಮೂನ್‌ಬೇಸ್' (Moon Base) ಯೋಜನೆ: ನಾಸಾ ಸಂಸ್ಥೆಯು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮಾನವನ ದೀರ್ಘಕಾಲೀನ ವಾಸ ಹಾಗೂ ಸಂಶೋಧನೆಗಾಗಿ 'ಮೂನ್ ಬೇಸ್' ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದೆ: ಹಂತ ೧ (2029 ರವರೆಗೆ): ರೋಬೋಟಿಕ್ ಮಿಷನ್‌ಗಳ ಮೂಲಕ ಚಂದ್ರನ ದಕ್ಷಿಣ ಧ್ರುವದ ಖನಿಜಗಳು, ನೀರು ಮತ್ತು ವಾತಾವರಣದ ಅಧ್ಯಯನ. ಹಂತ ೨ (2029 - 2032): ಚಂದ್ರನ ಮೇಲ್ಮೈನಲ್ಲಿ ಗಗನಯಾತ್ರಿಗಳು ವಾಸಿಸಲು ಅಗತ್ಯವಿರುವ ಮೂಲಸೌಕರ್ಯ, ಶಕ್ತಿ ಸಂಪನ್ಮೂಲ ಹಾಗೂ ಸಂಪರ್ಕ ವ್ಯವಸ್ಥೆಗಳ ನಿರ್ಮಾಣ. ಹಂತ ೩ (2032ರ ನಂತರ): ಪೂರ್ಣಪ್ರಮಾಣದ 'ಮೂನ್ ಬೇಸ್' ಸ್ಥಾಪನೆ. ಇದು ಮುಂದೆ ಮಂಗಳ ಗ್ರಹದ (Mars) ಮಾನವ ಸಹಿತ ಬಾಹ್ಯಾಕಾಶ ಯಾತ್ರೆಗೆ ತಂಗುದಾಣವಾಗಿ (Stepping Stone) ಕಾರ್ಯನಿರ್ವಹಿಸಲಿದೆ. ➤ ದ್ವಿಪಕ್ಷೀಯ ಹಿನ್ನೆಲೆ: 2025ರ ಫೆಬ್ರವರಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಡೆದ 'ಭಾರತ-ಅಮೆರಿಕ TRUST' (Transforming the Relationship Utilizing Strategic Technology) ಉಪಕ್ರಮದ ಭಾಗವಾಗಿ ಈ ಒಪ್ಪಂದ ಮುನ್ನೆಲೆಗೆ ಬಂದಿದೆ.