Job Description: * ಪ್ರಸ್ತುತ 2021 ರ ಆಗಸ್ಟ್. 29 ರಂದು ಭಾರತೀಯ ಮತ್ತು ಅಲ್ಜೀರಿಯನ್ ನೌಕಾಪಡೆಗಳು ಮೊದಲ ನೌಕಾ ವ್ಯಾಯಾಮವನ್ನು ಅಲ್ಜೀರಿಯಾ ತೀರದಲ್ಲಿ ನಡೆಸಿವೆ. * ಈ ವ್ಯಾಯಾಮದಂದು INS ತಬರ್ ಭಾರತವನ್ನು ಪ್ರತಿನಿಧಿಸಿದೆ, ಹಾಗೂ INS ಎಜೇಜರ್ ನೌಕಾ ಹಡಗು ಅಲ್ಜೀರಿಯಾ ದೇಶವನ್ನು ಪ್ರತಿನಿಧಿಸಿದೆ. * ಈ ನೌಕಾಪಡೆಯ ವ್ಯಾಯಾಮವು ಉಭಯ ರಾಷ್ಟ್ರಗಳ ಕಾರ್ಯಾಚರಣೆಯಾಗಿದೆ, ಇದರಿಂದಾಗಿ ಭವಿಷ್ಯದ ಸಹಕಾರವನ್ನು ವೃದ್ಧಿಸಲಿದೆ ಎಂದು ತಿಳಿಸಿದ್ದಾರೆ. * ಹೊಸದಿಲ್ಲಿಯಲ್ಲಿ ಅಲ್ಜೀರಿಯಾ ರಾಯಭಾರ ಕಚೇರಿಯನ್ನು ಹೊಂದಿದೆ, ಹಾಗೂ ಈ ದೇಶಗಳ ನಡುವಿನ ವ್ಯಾಪಾರವು 2001 ರಲ್ಲಿ US $ 55 ದಶಲಕ್ಷದಿಂದ 2011 ರಲ್ಲಿ US $ 3.4 ಶತಕೋಟಿಗೆ ಏರಿಕೆಕಂಡಿದೆ. * ಭಾರತ ದೇಶವು ಈ ಹಿಂದೆ 2003 ರ ಮೇ ತಿಂಗಳಲ್ಲಿ ಅಲ್ಜೀರಿಯಾದಲ್ಲಿ ನಡೆದ ಭೂಕಂಪದ ಸಂತ್ರಸ್ತರಿಗೆ ಸಹಾಯ ನೀಡುವ ನಿಟ್ಟಿನಲ್ಲಿ ಭಾರತ ಅಲ್ಜೀರಿಯಾಕ್ಕೆ US $ 1 ಮಿಲಿಯನ್ ಮಾನವೀಯ ನೆರವು ನೀಡಿದೆ. * ಅಲ್ಜೀರಿಯಾ ರಾಷ್ಟ್ರವು 2010 ರಲ್ಲಿ ಭಾರತದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಸಹಾಯದಿಂದ ಉಪಗ್ರಹ ಅಲ್ಸಾಟ್ 2 ಎ ನ್ನು ಕಕ್ಷೆಗೆ ಹಾರಿಸಿದೆ.