Job Description: * ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 30 ರಂದು ರಾಷ್ಟ್ರೀಯ ಸಣ್ಣ ಕೈಗಾರಿಕಾ ದಿನವನ್ನು, ಸಣ್ಣ ಉದ್ಯಮಗಳ ಮೌಲ್ಯವನ್ನು ಗುರುತಿಸಲು ಆಚರಣೆ ಮಾಡಲಾಗುತ್ತದೆ. * ಈ ರಾಷ್ಟ್ರೀಯ ಸಣ್ಣ ಕೈಗಾರಿಕೆಯು ದೇಶಾದ್ಯಂತ ಸಣ್ಣ ಉದ್ಯಮಗಳನ್ನು ಹಾಗೂ ಸಣ್ಣ ವ್ಯಾಪಾರಿಗಳಿಗೆ ಉತ್ತೇಜನ ನೀಡಲು ವಾರ್ಷಿಕ ಆಚರಣೆ ಮಾಡಲಾಗುತ್ತದೆ, ಹಾಗೂ ಇದೇ ದಿನದಂದು ಉದ್ಯೋಗವಿಲ್ಲದವರಿಗೆ ಉದ್ಯೋಗ ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಆಚರಣೆ ಮಾಡಲಾಗುತ್ತದೆ. * ಪ್ರಸ್ತುತ 2000 ರ ಆಗಸ್ಟ್ 30, ರಂದು ಸಣ್ಣ-ಪ್ರಮಾಣದ ಕೈಗಾರಿಕೆಗಳ ಸಚಿವಾಲಯವು (SSI) ವಲಯಕ್ಕೆ ಸಮಗ್ರವಾದ ಪಾಲಿಸಿ ಪ್ಯಾಕೇಜ್ ನ್ನು ಆರಂಭಿಸಿದೆ. * ಆಗಸ್ಟ್ 30 ನ್ನು 'SSI ದಿನ' ಎಂದು ಘೋಷಣೆ ಮಾಡಲು ಸಚಿವಾಲಯವು ಒಪ್ಪಿಗೆ ನೀಡಿದೆ.