Job Description: ➤ ಕೆನಡಾ ಪ್ರವಾಸ ಅಥವಾ ಅಲ್ಲಿ ನೆಲೆಸಲು ಬಯಸುವ ಭಾರತೀಯರಿಗೆ ಇತ್ತೀಚೆಗೆ ಕೆನಡಾ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಭಾರತೀಯ ಅರ್ಜಿದಾರರ 'ಸೂಪರ್ ವೀಸಾ' (Super Visa) ಪ್ರೊಸೆಸಿಂಗ್ ಅವಧಿಯನ್ನು ಕೆನಡಾ ಗಣನೀಯವಾಗಿ ಕಡಿತಗೊಳಿಸಿದೆ. ➤ ಹೊಸ ನಿಯಮಾವಳಿ: ಕೆನಡಾದ ವಲಸೆ ಇಲಾಖೆಯಾದ IRCC (Immigration, Refugees and Citizenship Canada) ಭಾರತೀಯರಿಗಾಗಿ ಸೂಪರ್ ವೀಸಾ ಪ್ರೊಸೆಸಿಂಗ್ ಅವಧಿಯನ್ನು 50 ದಿನಗಳಿಗೆ ಇಳಿಸಿದೆ. ಇದಕ್ಕೂ ಮುನ್ನ ಈ ವೀಸಾ ಪ್ರೊಸೆಸಿಂಗ್‌ಗೆ 66 ದಿನಗಳು ತಗಲುತ್ತಿದ್ದವು. ಅಂದರೆ ಪ್ರಸ್ತುತ 16 ದಿನಗಳ ಅವಧಿಯನ್ನು ಕಡಿತಗೊಳಿಸಲಾಗಿದೆ. ಕೆನಡಾ ಸರ್ಕಾರದ ಅಧಿಕೃತ ಸೂಪರ್ ವೀಸಾ ಸೇವಾ ಮಾನದಂಡದ ಅವಧಿ 112 ದಿನಗಳಾಗಿದ್ದು, ಪ್ರಸ್ತುತ 50 ದಿನಗಳಲ್ಲೇ ವೀಸಾ ಸಿಗುತ್ತಿರುವುದು ನಿಗದಿಗಿಂತ ಅತ್ಯಂತ ವೇಗವಾಗಿದೆ.➤ ವೀಸಾ ಅವಧಿಗಳ ಇತ್ತೀಚಿನ ತುಲನಾತ್ಮಕ ಮಾಹಿತಿ:ಸೂಪರ್ ವೀಸಾ (Super Visa): 50 ದಿನಗಳು ವಿಸಿಟರ್ ವೀಸಾ (Visitor Visa): 21 ದಿನಗಳು ಸ್ಟಡಿ ಪರ್ಮಿಟ್ (Study Permit): 5 ವಾರಗಳುಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ