Job Description: ➤ ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವದಾದ್ಯಂತ ‘ವಿಶ್ವ ಸಿಂಹ ದಿನ’ (World Lion Day) ವನ್ನು ಆಚರಿಸಲಾಗುತ್ತದೆ. ಸಿಂಹಗಳ ಸಂರಕ್ಷಣೆ, ಅವುಗಳ ಆವಾಸಸ್ಥಾನದ ರಕ್ಷಣೆ ಹಾಗೂ ಪರಿಸರ ವ್ಯವಸ್ಥೆಯಲ್ಲಿ ಅವುಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಭಾರತಕ್ಕೆ ಈ ದಿನ ಅತ್ಯಂತ ವಿಶೇಷ. ಏಕೆಂದರೆ ವಿಶ್ವದಲ್ಲೇ ಮುಕ್ತವಾಗಿ ಓಡಾಡುವ ಏಷ್ಯಟಿಕ್ ಸಿಂಹಗಳ (Asiatic Lions - Panthera leo persica) ಏಕೈಕ ನೈಸರ್ಗಿಕ ನಿವಾಸ ಭಾರತದ ಗುಜರಾತ್‌ನ ಸೌರಾಷ್ಟ್ರ ಪ್ರದೇಶವಾಗಿದೆ. ವಿಜ್ಞಾನ ಹೆಸರು: Panthera leo persica (ಏಷ್ಯಟಿಕ್ ಸಿಂಹ). ಮುಖ್ಯ ಆವಾಸಸ್ಥಾನ: ಗೀರ್ ರಾಷ್ಟ್ರೀಯ ಉದ್ಯಾನವನ ಮತ್ತು ಅಭಯಾರಣ್ಯ (Gir National Park & Sanctuary), ಗುಜರಾತ್. ಸಿಂಹಗಳ ಸಂಖ್ಯೆ ಪ್ರಗತಿ: 20 ನೇ ಶತಮಾನದ ಆರಂಭದಲ್ಲಿ 50 ಕ್ಕಿಂತ ಕಡಿಮೆ ಇತ್ತು. 2020 ರ ಗಣತಿಯಲ್ಲಿ 674 ಇದ್ದ ಸಿಂಹಗಳ ಸಂಖ್ಯೆ, 2025 ರ ಅಂದಾಜಿನ ಪ್ರಕಾರ 891 ಕ್ಕೆ ಏರಿಕೆಯಾಗಿದೆ (5 ವರ್ಷಗಳಲ್ಲಿ ಸುಮಾರು 32% ಹೆಚ್ಚಳ). ವ್ಯಾಪ್ತಿ: ಸೌರಾಷ್ಟ್ರದ 11 ಜಿಲ್ಲೆಗಳ ಸುಮಾರು 35,000 ಚದರ ಕಿಲೋಮೀಟರ್ ಪ್ರದೇಶ. ಎರಡನೇ ಪರ್ಯಾಯ ಆವಾಸಸ್ಥಾನ: ಗುಜರಾತ್‌ನ ಬರ್ಡಾ ವನ್ಯಜೀವಿ ಅಭಯಾರಣ್ಯ (Barda Wildlife Sanctuary). ಕೇಂದ್ರ ಸರ್ಕಾರದ ಯೋಜನೆ: ಪ್ರಾಜೆಕ್ಟ್ ಲಯನ್ (Project Lion) - 2020 ರಲ್ಲಿ ಪ್ರಧಾನಿಯವರಿಂದ ಚಾಲನೆ. ➤ ಗುಜರಾತ್‌ನಲ್ಲಿ ಏಷ್ಯಟಿಕ್ ಸಿಂಹಗಳ ಚೇತರಿಕೆ: ಒಮ್ಮೆ ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಉತ್ತರ ಭಾರತದ ವಿಶಾಲ ಪ್ರದೇಶಗಳಲ್ಲಿ ಹರಡಿಕೊಂಡಿದ್ದ ಏಷ್ಯಟಿಕ್ ಸಿಂಹಗಳು, 19 ನೇ ಶತಮಾನದಲ್ಲಿ ಬ್ರಿಟಿಷರ ಅತಿಯಾದ ಬೇಟೆ ಹಾಗೂ ಆವಾಸಸ್ಥಾನ ನಾಶದಿಂದಾಗಿ ನಾಶದ ಅಂಚಿಗೆ ತಲುಪಿದ್ದವು. ಜುಸಾಗಢದ ನವಾಬರು ಗೀರ್ ಅರಣ್ಯದಲ್ಲಿ ಬೇಟೆಯನ್ನು ನಿಷೇಧಿಸುವ ಮೂಲಕ ಸಿಂಹಗಳ ರಕ್ಷಣೆಗೆ ಅಡಿಪಾಯ ಹಾಕಿದರು. ಸ್ವಾತಂತ್ರ್ಯಾನಂತರ 1965 ರಲ್ಲಿ ಗೀರ್ ಪ್ರದೇಶವನ್ನು ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು.ಸಾಧನೆಗೆ ಪ್ರಮುಖ ಕಾರಣಗಳು: ಸ್ಥಳೀಯ ಮಾಲ್ಧಾರಿ (Maldhari) ಸಮುದಾಯದ ಸಹಕಾರ, ಕಟ್ಟುನಿಟ್ಟಿನ ವನ್ಯಜೀವಿ ಸಂರಕ್ಷಣಾ ಕಾಯ್ದೆಗಳು, ಹೈಟೆಕ್ ಕಣ್ಗಾವಲು ವ್ಯವಸ್ಥೆ, ಮತ್ತು ಪರಿಸರ ಪ್ರವಾಸೋದ್ಯಮ (Eco-tourism). ➤ ಪರಿಸರ ವ್ಯವಸ್ಥೆಯಲ್ಲಿ ಸಿಂಹಗಳ ಪಾತ್ರ: ಅಗ್ರಭಕ್ಷಕ (Apex Predator): ಆಹಾರ ಸರಪಳಿಯ ತುದಿಯಲ್ಲಿರುವ ಸಿಂಹಗಳು ಜಿಂಕೆ, ಸಾಂಬಾರ್, ಕಾಡುಪಂದಿಗಳಂತಹ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡುತ್ತವೆ. ಜೀವವೈವಿಧ್ಯದ ಸಮತೋಲನ: ಸಸ್ಯಾಹಾರಿಗಳ ಸಂಖ್ಯೆ ನಿಯಂತ್ರಣದಲ್ಲಿರುವುದರಿಂದ ಕಾಡಿನ ಸಸ್ಯವರ್ಗ ಮತ್ತು ಜೀವವೈವಿಧ್ಯತೆ ಸುರಕ್ಷಿತವಾಗಿರುತ್ತದೆ. ಇತರ ಜೀವಿಗಳಿಗೆ ಆಹಾರ: ಸಿಂಹಗಳು ಬೇಟೆಯಾಡಿ ಬಿಟ್ಟ ಮಾಂಸವು ಕತ್ತೆಕಿರುಬ, ಕಾಗೆ ಹಾಗೂ ರಣಹದ್ದುಗಳಂತಹ ಶವಭಕ್ಷಕಗಳಿಗೆ ಆಹಾರವಾಗುತ್ತದೆ. ನಿಮ್ಮ ಸರ್ಕಾರಿ ಉದ್ಯೋಗದ ಕನಸನ್ನು ನನಸಾಗಿಸಲು, ತಕ್ಷಣ 'KPSCVaani' ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಿ.