Job Description: ➤ ದೇಶದ ವಿಮಾ ಕ್ಷೇತ್ರದಲ್ಲಿ ಗ್ರಾಹಕರನ್ನು ವಂಚಿಸುವ ಹಾಗೂ ತಪ್ಪು ದಾರಿಗೆಳೆಯುವ 'ಡಾರ್ಕ್ ಪ್ಯಾಟರ್ನ್ಸ್' (Dark Patterns) ಮತ್ತು 'ಮಿಸ್-ಸೆಲ್ಲಿಂಗ್' (Mis-selling - ತಪ್ಪು ಮಾಹಿತಿ ನೀಡಿ ಪಾಲಿಸಿ ಮಾರುವುದು) ಪ್ರವೃತ್ತಿಗೆ ಕಡಿವಾಣ ಹಾಕಲು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗ್ರಾಹಕರ ನಂಬಿಕೆಯನ್ನು ಮರುಸ್ಥಾಪಿಸಲು IRDAI, ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಆಡಿಟರ್ಸ್ ಆಫ್ ಇಂಡಿಯಾ (IPAI) ಸಂಸ್ಥೆಯೊಂದಿಗೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿದೆ.➤ 'ಡಾರ್ಕ್ ಪ್ಯಾಟರ್ನ್ಸ್' (Dark Patterns): ಸರಳವಾಗಿ ಹೇಳುವುದಾದರೆ, ವೆಬ್‌ಸೈಟ್‌ಗಳು ಅಥವಾ ಮೊಬೈಲ್ ಆಪ್‌ಗಳಲ್ಲಿ ಗ್ರಾಹಕರಿಗೆ ತಿಳಿಯದಂತೆ ಅವರ ನಿರ್ಧಾರಗಳನ್ನು ತಮಗೆ ಬೇಕಾದಂತೆ ಕುಶಲತೆಯಿಂದ ನಿಯಂತ್ರಿಸುವ ವಿನ್ಯಾಸ ಅಥವಾ ತಂತ್ರಗಳನ್ನೇ 'ಡಾರ್ಕ್ ಪ್ಯಾಟರ್ನ್ಸ್' ಎನ್ನಲಾಗುತ್ತದೆ.➤ ವಿಮಾ ವಲಯದಲ್ಲಿ ಡಾರ್ಕ್ ಪ್ಯಾಟರ್ನ್ಸ್‌ನ ಪ್ರಮುಖ ಉದಾಹರಣೆಗಳು: ಹೆಚ್ಚುವರಿ ಮಾಹಿತಿ ಬೇಡಿಕೆ: ಗ್ರಾಹಕರು ಕೇವಲ ಪಾಲಿಸಿ ವಿವರ ಅಥವಾ ಪ್ರೀಮಿಯಂ ದರ ನೋಡಲು ಹೋದರೂ ಅವರ ಫೋನ್ ನಂಬರ್, ಇಮೇಲ್‌ನಂತಹ ವೈಯಕ್ತಿಕ ಮಾಹಿತಿಗಳನ್ನು ಕಡ್ಡಾಯವಾಗಿ ಕೇಳುವುದು. ಹಿಡನ್ ಚಾರ್ಜಸ್ (Grounded Hiding): ಪಾಲಿಸಿಯ ಅಸಲಿ ನಿಯಮಗಳು ಮತ್ತು ಗುಪ್ತ ಶುಲ್ಕಗಳನ್ನು (Hidden Charges) ಸಂಕೀರ್ಣ ಪ್ರಕ್ರಿಯೆಗಳ ಹಿಂದೆ ಮುಚ್ಚಿಡುವುದು. ಬಲವಂತದ ಆಯ್ಕೆಗಳು (Forced Action): ಪ್ರೀಮಿಯಂ ಪಾವತಿಸುವಾಗ ಗ್ರಾಹಕರಿಗೆ ಗೊತ್ತಿಲ್ಲದಂತೆ ಬೇರೆ ಆಡ್-ಆನ್ (Add-on) ಉತ್ಪನ್ನಗಳನ್ನು ಆಟೋಮ್ಯಾಟಿಕ್ ಆಗಿ ಆಯ್ದುಕೊಳ್ಳುವಂತೆ ಮಾಡುವುದು. ರದ್ದತಿ ಕಷ್ಟಕರವಾಗಿಸುವುದು: ಒಮ್ಮೆ ಖರೀದಿಸಿದ ಪಾಲಿಸಿಯನ್ನು ಕ್ಯಾನ್ಸಲ್ ಮಾಡುವುದನ್ನು ಅತ್ಯಂತ ಸಂಕೀರ್ಣಗೊಳಿಸುವುದು. ಸ್ಪ್ಯಾಮ್ ಕರೆಗಳ ಕಿರಿಕಿರಿ: ಗ್ರಾಹಕರ ಇಷ್ಟವಿಲ್ಲದಿದ್ದರೂ ಪದೇ ಪದೇ ಪ್ರಚಾರದ ಕರೆಗಳು ಹಾಗೂ ಸಂದೇಶಗಳನ್ನು ಕಳುಹಿಸಿ ಒತ್ತಡ ಹೇರುವುದು. ➤ IRDAI ತೆಗೆದುಕೊಂಡಿರುವ ಪ್ರಮುಖ ಕ್ರಮಗಳು IPAI ಜೊತೆ ಒಪ್ಪಂದ: ವಿಮಾ ವಲಯದ ಡಾರ್ಕ್ ಪ್ಯಾಟರ್ನ್ಸ್‌ಗಳ ಮೇಲ್ವಿಚಾರಣೆಗೆ IRDAI ಸಂಸ್ಥೆಯು IPAI ಜೊತೆ 9 ತಿಂಗಳ ಒಪ್ಪಂದ ಮಾಡಿಕೊಂಡಿದೆ. ಸ್ವಯಂ ಮೌಲ್ಯಮಾಪನ ವಿಫಲ: ಕಂಪನಿಗಳು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದ ಕಾರಣ, IRDAI ಈಗ ಸ್ವತಂತ್ರ ಸಂಸ್ಥೆಯ ಮೂಲಕ ಆಡಿಟ್ ನಡೆಸಲು ಮುಂದಾಗಿದೆ. ಆರ್‌ಬಿಐ ಮಾದರಿ ಅನುಸರಣೆ: ಬ್ಯಾಂಕಿಂಗ್ ವಲಯದಲ್ಲಿ ಆರ್‌ಬಿಐ ತಂದಿರುವ ನಿಯಮಗಳ ಮಾದರಿಯಲ್ಲೇ, ವಿಮಾ ವಲಯದಲ್ಲೂ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುತ್ತಿದೆ.ಪ್ರತಿ ದಿನದ ಉದ್ಯೋಗ ಮಾಹಿತಿ ಅಪ್ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ