Job Description: * ಪ್ರಸ್ತುತ ಪೋಲೆಂಡ್ನ ರಾಜಧಾನಿಯಾಗಿರುವ ವಾರ್ಸಾದಲ್ಲಿ ನಡೆಯುತ್ತಿರುವ ಪೋಲೆಂಡ್ ಕುಸ್ತಿ ಟೂರ್ನಿಯ 53 KG ಮಹಿಳಾ ವಿಭಾಗದ ಫೈನಲ್ನಲ್ಲಿ ಭಾರತದ ತಾರಾ ಕುಸ್ತಿ ಪಟು ವಿನೇಶ್ ಫೋಗಟ್ ಅವರು ಉಕ್ರೇನಿನ ಕ್ರಿಸ್ಟಿಯಾನ ಬ್ರೀಜಾ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. * ವಿನೀಶ್ ಫೋಗಟ್ ಅವರ 3ನೇ ಚಿನ್ನದ ಪದಕ ಇದಾಗಿದೆ, ಈ ಮೊದಲು ಮಾರ್ಚ್ನಲ್ಲಿ ಮೆಟ್ಟಿಯೂ ಪೆಲಿಕಾನ್ ಇವೆಂಟ್ ಮತ್ತು ಏಪ್ರಿಲ್'ನಲ್ಲಿ ನಡೆದ ಏಷಿಯನ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. * ಈ ಪೊಲೆಂಡ್ನ ಕುಸ್ತಿ ಟೂರ್ನಿಯಲ್ಲಿ ಭಾರತವು 61 KG ಪುರುಷರ ವಿಭಾಗದಲ್ಲಿ ರವಿಕುಮಾರ್ ದಹಿಯಾ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಪ್ರಸ್ತುತ ಭಾರತೀಯ 4 ಕುಸ್ತಿ ಪಟುಗಳಾಗಿರುವ ವಿನೇಶ್ ಪೋಗಟ್, ಅಂನ್ಶು ಮಲಿಕ್, ರವಿಕುಮಾರ್ ದಹಿಯಾ ಮತ್ತು ದೀಪಕ್ ಪುನಿಯಾ ಅವರು ಈ ಬಾರಿಯ ಟೊಕಿಯೊ ಒಲಿಂಪಿಕ್ಸ್ಗೆ ತೆರಳಲಿದ್ದಾರೆ.