Job Description: * ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಚಾಂಪಿಯನಶಿಪ್ನಲ್ಲಿ ಸರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರು ಗ್ರೀಸ್ನ ಸ್ಟೆಫನೊಸ್ ಸಿಟ್ಸಿಪಾಸ್ ಅವರನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿದ್ದಾರೆ. * ನೊವಾಕ್ ಜೊಕೊವಿಕ್ ಅವರು 2ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ, ಹಾಗೂ ಗ್ರ್ಯಾನ್ಸ್ಲಾಂ ಟೂರ್ನಿಗಳಲ್ಲಿ 2 ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. * ನೊವಾಕ್ ಜೊಕೊವಿಕ್ ಅವರು ಒಟ್ಟಾರೆ ಗೆದ್ದಿರುವ 19 ನೇ ಗ್ರ್ಯಾನ್ಸ್ಲಾಂ ಪ್ರಶಸ್ತಿ ಇದಾಗಿದೆ. * ನೊವಾಕ್ ಜೋಕೊವಿಕ್ ಅವರ 19 ಗ್ರಾಂಡ್ ಸ್ಲಾಂ ಪ್ರಶಸ್ತಿಗಳು: ಆಸ್ಟ್ರೇಲಿಯನ್ ಓಪನ್: 9 ಫ್ರೆಂಚ್ ಓಪನ್: 2 ವಿಂಬಲ್ಡನ್: 5 ಯುಎಸ್ ಓಪನ್: 3 * ಅತೀ ಹೆಚ್ಚು ಗ್ರಾಂಡ್ ಸ್ಲಾಂ ಪ್ರಶಸ್ತಿಗಳನ್ನೂ ಗೆದ್ದವರು: ರೋಜರ್ ಫೆಡರರ್: 20 ರಾಫೆಲ್ ನಡಾಲ್: 20 ನೊವಾಕ್ ಜೋಕೊವಿಕ್: 19