Job Description: * ಒಡಿಶಾ ರಾಜ್ಯದಲ್ಲಿ ಆಲಿವ್ ರಿಡ್ಲೆ ಆಮೆಗಳನ್ನು ರಕ್ಷಿಸಲು ಇಂಡಿಯನ್ ಕೋಸ್ಟ್ ಗಾರ್ಡ್ ಕಾನೂನುಗಳನ್ನು ಜಾರಿಗೊಳಿಸಿದೆ, ಜೊತೆಗೆ ಒಲಿವಿಯಾ ಕಾರ್ಯಾಚರಣೆಯನ್ನು ಸಹ ಆರಂಭಿಸಿದೆ. * ಇಂಡಿಯನ್ ಕೋಸ್ಟ್ ಗಾರ್ಡ್ 1980 ರ ದಶಕದಲ್ಲಿ ಆಪರೇಷನ್ ಒಲಿವಿಯಾವನ್ನು ಆರಂಭಿಸಿತ್ತು, ಪ್ರತಿವರ್ಷ ನವೆಂಬರ್ ನಿಂದ ಡಿಸೆಂಬರ್ ತಿಂಗಳಿನಲ್ಲಿ ಈ ಆಲಿವ್ ರಿಡ್ಲೆ ಆಮೆಗಳು ಸಂತಾನೋತ್ಪತ್ತಿಗಾಗಿ ಒಡಿಶಾ ಕರಾವಳಿಯಲ್ಲಿ ಗೂಡುಕಟ್ಟಲು ಆರಂಭಿಸುತ್ತವೆ ಇವುಗಳನ್ನು ರಕ್ಷಿಸಲು ಈ ಆಪರೇಷನ್ ಒಲಿವಿಯಾ ಕಾರ್ಯಾಚರಣೆಯು ಸಹಾಯ ಮಾಡುತ್ತದೆ. * ಒಡಿಶಾ ಕರಾವಳಿಯಲ್ಲಿ ಕೋಸ್ಟ್ ಗಾರ್ಡನ ಫಾಸ್ಟ್ ಪೆಟ್ರೋಲ್ ಹಡಗುಗಳು, ಇಂಟರ್ಸೆಪ್ಟರ್ ಕ್ರಾಫ್ಟ್, ಏರ್ ಕುಶನ್ ಹಡಗುಗಳು ಹಾಗೂ ಡಾರ್ನಿಯರ್ ವಿಮಾನಗಳ ಮೂಲಕ ನವೆಂಬರ್ ನಿಂದ ಮೇ ತಿಂಗಳಿನವರೆಗೆ ಕಣ್ಗಾವಲು ನಡೆಸಲಾಗುತ್ತದೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ತಿಳಿಸಿದೆ. * ಪ್ರಸ್ತುತ ಈ ಆಪರೇಷನ್ ಒಲಿವಿಯಾ ನವೆಂಬರ್ 2020 ರಿಂದ ಮೇ 2021 ರ ನಡುವೆ ಇಂಡಿಯನ್ ಕೋಸ್ಟ್ ಗಾರ್ಡ್ 225 ಹಡಗು ಮತ್ತು 388 ವಿಮಾನಗಳನ್ನೂ ಬಳಸಿ ಒಡಿಶಾ ಕರಾವಳಿಯಲ್ಲಿ ಕಣ್ಗಾವಲು ಕಾರ್ಯಾಚರಣೆಯನ್ನು ನಡೆಸಿ ಸರಿ ಸುಮಾರು 3.49 ಲಕ್ಷ ಆಮೆಗಳ ರಕ್ಷಣೆ ಮಾಡಿದ್ದಾರೆ. * ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ರೆಡ್ ಲಿಸ್ಟ್ ಅಡಿಯಲ್ಲಿ ಆಲಿವ್ ರಿಡ್ಲೆ ಆಮೆಗಳನ್ನು ದುರ್ಬಲ ಎಂದು ಪಟ್ಟಿ ಮಾಡಲಾಗಿದೆ, ಹಾಗೂ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಈ ಆಮೆಗಳನ್ನು ವೇಳಾಪಟ್ಟಿಗೆ ಸೇರಿಸಿದ್ದಾರೆ. * ಈ ಆಲಿವ್ ರಿಡ್ಲೆ ಆಮೆಗಳ ಸಾಮೂಹಿಕ ಗೂಡುಕಟ್ಟುವಿಕೆಯನ್ನು ಅರಿಬಾಡಾ ಎಂದು ಕರೆಯುತ್ತಾರೆ, ಒಡಿಶಾ ರಾಜ್ಯದ ಕರಾವಳಿಯಲ್ಲಿ 4 ಅರಿಬಾಡಾ ಸ್ಥಳಗಳಿವೆ.