Job Description: * ಇಸ್ರೇಲ್'ನ ಹೊಸ ಪ್ರಧಾನಿಯಾಗಿ 49 ವರ್ಷ ವಯಸ್ಸಿನ ನಫ್ತಾಲಿ ಬೆನೆಟ್ ಅವರು ಅಧಿಕಾರ ಸ್ವೀಕಾರ ಮಾಡಿದರು, ಇವರು ಧಾರ್ಮಿಕ-ರಾಷ್ಟ್ರೀಯವಾದಿ ಹಾಗೂ ಬಹು-ಮಿಲಿಯನೇರ್ ಮಾಜಿ ಟೆಕ್ ಉದ್ಯಮಿ ಕೂಡ ಆಗಿದ್ದರು, ಇದರ ಜೊತೆಗೆ ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ, ಪ್ರಸ್ತುತ ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು 12 ವರ್ಷಗಳ ಕಾಲ ಇಸ್ರೇಲ್'ನ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದರು. * ನಫ್ತಾಲಿ ಬೆನೆಟ್ ಅವರ ಬಗ್ಗೆ ಮಾಹಿತಿ: ಇವರು ಪರಿಪೂರ್ಣ ಇಂಗ್ಲಿಷ್ ಮಾತನಾಡುವ ಅಮೇರಿಕನ್ ಮೂಲದ ಪೋಷಕರ ಮಗ, ಇವರು ಮಿಲಿಟರಿ ಸೇವೆ, ಕಾನೂನು ಶಾಲೆ ಹಾಗೂ ಖಾಸಗಿ ವಲಯಕ್ಕಾಗಿ ಉತ್ತರ ಅಮೆರಿಕ ಮತ್ತು ಇಸ್ರೇಲ್ ನಡುವೆ ಸಂಚರಿಸುತ್ತಿದ್ದರು, ಇವರು ಅಲ್ಟ್ರಾ-ನ್ಯಾಷನಲಿಸ್ಟ್ ಮತ್ತು ಹಾರ್ಡ್-ರೈಟ್ ನಾಯಕರಾಗಿದ್ದರು, ಗಣ್ಯ ಸಯರೆಟ್ ಮಟ್ಕಲ್ ಕಮಾಂಡೋ ಘಟಕದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. * ನಫ್ತಾಲಿ ಬೆನೆಟ್ ಅವರು 1999 ರಲ್ಲಿ ಸೈಟಾ ಎಂಬ ವಂಚನೆ-ವಿರೋಧಿ ಸಾಫ್ಟ್ವೇರ್ ಕಂಪನಿಯನ್ನು ಆರಂಭಿಸಿದ್ದರು, ಮತ್ತೆ 2005 ರಲ್ಲಿ ಈ ಕಂಪನಿಯನ್ನು US ಮೂಲದ RSA ಸೆಕ್ಯುರಿಟಿಗೆ ಮಾರಾಟ ಮಾಡಿದರು. * ಭಾರತ ಮತ್ತು ಇಸ್ರೇಲ್'ನ ಸಂಬಂಧ: 1950 ರಿಂದ ಭಾರತ ಮತ್ತು ಇಸ್ರೇಲ್ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ವಿಸ್ತರಿಸಿಕೊಂಡಿವೆ, ಭಾರತವು ಇಸ್ರೇಲಿ ಮಿಲಿಟರಿ ಉಪಕರಣಗಳನ್ನು ಅತೀ ಹೆಚ್ಚು ಖರೀದಿಸುವ ದೇಶವಾಗಿದೆ, ಪ್ರಸ್ತುತ ಭಾರತಕ್ಕೆ ರಷ್ಯಾ ರಾಷ್ಟ್ರದ ಬಳಿಕ ಇಸ್ರೇಲ್ ರಾಷ್ಟ್ರವು 2 ನೇ ಅತೀ ದೊಡ್ಡ ರಕ್ಷಣಾ ಸಾಮಗ್ರಿಗಳನ್ನು ಪೂರೈಕೆ ಮಾಡುವ ದೇಶವಾಗಿದೆ. * ಭಾರತ ದೇಶವು ಏಷ್ಯಾದ 3 ನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಇಸ್ರೇಲ್'ನ 10 ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.