Job Description: ➤ ಜಿಸಿಎಸ್ (GCS) ಸಂಸ್ಥೆಯು ಬಿಡುಗಡೆ ಮಾಡಿರುವ 2026ನೇ ಸಾಲಿನ ಜಾಗತಿಕ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ, ವಿಶ್ವದ ಒಟ್ಟು 197 ದೇಶಗಳ ಪೈಕಿ ಭಾರತವು 125ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷದ ಶ್ರೇಯಾಂಕಕ್ಕೆ ಹೋಲಿಸಿದರೆ ಭಾರತದ ಸ್ಥಾನದಲ್ಲಿ 1 ಸ್ಥಾನ ಕುಸಿತ ಕಂಡಿರುವುದು ಗಮನಾರ್ಹವಾಗಿದೆ. ➤ ಪ್ರಸ್ತುತ ವರದಿಯ ಪ್ರಕಾರ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವಿಶ್ವದ 26 ದೇಶಗಳಿಗೆ ವೀಸಾ ಇಲ್ಲದೆ (Visa-Free Travel) ಅಥವಾ ಆನ್-ಅರೈವಲ್ ವೀಸಾ ಮೂಲಕ ಮುಕ್ತವಾಗಿ ಪ್ರಯಾಣಿಸಬಹುದಾಗಿದೆ.➤ ಜಿಸಿಎಸ್ ಸಂಸ್ಥೆಯು ಕೇವಲ ವೀಸಾ ಮುಕ್ತ ಪ್ರಯಾಣವನ್ನು ಮಾತ್ರವಲ್ಲದೆ, ಒಂದು ದೇಶದ ಪಾಸ್‌ಪೋರ್ಟ್‌ನ ಒಟ್ಟಾರೆ ಶಕ್ತಿಯನ್ನು ಅಳೆಯಲು ಈ ಕೆಳಗಿನ ಪ್ರಮುಖ ಅಂಶಗಳನ್ನು ಪರಿಗಣಿಸುತ್ತದೆ: ವೀಸಾ ರಹಿತ ಪ್ರಯಾಣ: ನಾಗರಿಕರು ವೀಸಾ ಇಲ್ಲದೆ ಎಷ್ಟು ದೇಶಗಳಿಗೆ ಹೋಗಬಹುದು ಎಂಬ ಸಂಖ್ಯೆ. ಹೂಡಿಕೆ ವಾತಾವರಣ: ಆ ದೇಶದಲ್ಲಿರುವ ಆರ್ಥಿಕ ಮತ್ತು ಉದ್ಯಮ ಸ್ನೇಹಿ ವ್ಯವಸ್ಥೆ. ಜೀವನಮಟ್ಟ: ನಾಗರಿಕರ ಜೀವನದ ಗುಣಮಟ್ಟ ಮತ್ತು ಸೌಲಭ್ಯಗಳು. ಆರ್ಥಿಕತೆ: ದೇಶದ ಒಟ್ಟಾರೆ ಆರ್ಥಿಕ ಸ್ಥಿರತೆ ಮತ್ತು ಪ್ರಗತಿ. ➤ ವಿಶ್ವದ ಟಾಪ್ ದೇಶಗಳು ಯಾವುವು? ಮೊದಲ ಸ್ಥಾನ: ಸ್ವೀಡನ್ ಎರಡನೇ ಸ್ಥಾನ : ಸ್ವಿಜರ್ಲ್ಯಾಂಡ್ ಮೂರನೇ ಸ್ಥಾನ : ಫಿನ್ಲೆಂಡ್ ಕೊನೆಯ ಸ್ಥಾನ : ಅಫ್ಘಾನಿಸ್ತಾನ ಪಡೆದುಕೊಂಡಿದೆ.