Job Description: ➤ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರೆಲ್ಲರೂ ಕಾನೂನುಬದ್ಧವಾಗಿ ಭಾರತದ ಅಂತಿಮ ಪ್ರಜೆಗಳೇ? ಇಂತಹದೊಂದು ಗಂಭೀರ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಇತ್ತೀಚೆಗೆ ಮಹತ್ವದ ಸ್ಪಷ್ಟನೆ ನೀಡಿದೆ. ಭಾರತೀಯ ಪಾಸ್‌ಪೋರ್ಟ್ ಕೇವಲ ವಿದೇಶ ಪ್ರಯಾಣಕ್ಕೆ ಬಳಸುವ ಒಂದು ಅಧಿಕೃತ ದಾಖಲೆಯಷ್ಟೇ (Travel Document) ಹೊರತು, ಅದನ್ನು ಭಾರತದ ಪೌರತ್ವಕ್ಕೆ ಏಕೈಕ ಅಥವಾ ಸ್ವತಂತ್ರ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸಚಿವಾಲಯದ ಈ ಹೇಳಿಕೆಯು ಸಾರ್ವಜನಿಕರಲ್ಲಿ ಮತ್ತು ಡಿಜಿಟಲ್ ಕಾರ್ಡ್‌ಗಳನ್ನೇ ನೆಚ್ಚಿಕೊಂಡಿರುವ ಜನಸಾಮಾನ್ಯರಲ್ಲಿ ವ್ಯಾಪಕ ಗೊಂದಲ ಹಾಗೂ ಚರ್ಚೆಯನ್ನು ಮೂಡಿಸಿದೆ.➤ ಕಾನೂನು ನಿಯಮ (1955ರ ಪೌರತ್ವ ಕಾಯಿದೆ): ಒಬ್ಬ ವ್ಯಕ್ತಿಯು 'ಭಾರತದ ಪ್ರಜೆ' ಎಂದು ಪ್ರಾಥಮಿಕವಾಗಿ ಖಚಿತಪಟ್ಟ ಮೇಲೆಯೇ ಸರ್ಕಾರ ಪಾಸ್‌ಪೋರ್ಟ್ ನೀಡುತ್ತದೆ ನಿಜ. ಆದರೆ, ಯಾವುದೇ ಕಾನೂನು ವಿವಾದ ಅಥವಾ ಪೌರತ್ವದ ಪ್ರಶ್ನೆ ಎದುರಾದಾಗ ನ್ಯಾಯಾಲಯದಲ್ಲಿ ಪಾಸ್‌ಪೋರ್ಟ್ ಅನ್ನೇ ಅಂತಿಮ ಪುರಾವೆ ಎಂದು ಒಪ್ಪಲು ಸಾಧ್ಯವಿಲ್ಲ. 1955ರ ಭಾರತೀಯ ಪೌರತ್ವ ಕಾಯಿದೆಯ ಪ್ರಕಾರ, ಭಾರತದಲ್ಲಿ ಪೌರತ್ವವು ಜನನ (Birth), ವಂಶಾವಳಿ (Descent), ನೋಂದಣಿ (Registration) ಅಥವಾ ಪ್ರಕೃತಿಗತವಾಗಿ (Naturalisation) ಸಿಗುತ್ತದೆಯೇ ವಿನಃ ಯಾವುದೇ ಒಂದು ನಿರ್ದಿಷ್ಟ ಆಧುನಿಕ ದಾಖಲೆಯಿಂದಲ್ಲ. ಈ ಹಿಂದೆ ಗೃಹ ಸಚಿವಾಲಯ ಕೂಡ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿ, ಆಧಾ‌ರ್, ಪಾಸ್‌ಪೋರ್ಟ್, ವೋಟರ್ ಐಡಿ (ಮತದಾರರ ಗುರುತಿನ ಚೀಟಿ) ಅಥವಾ ಜನನ ಪ್ರಮಾಣಪತ್ರಗಳು ಪೌರತ್ವದ ಅಂತಿಮ ಅಥವಾ ನಿರ್ಣಾಯಕ ದಾಖಲೆಗಳಲ್ಲ ಎಂದು ತಿಳಿಸಿತ್ತು. ➤ ಡಿಜಿಟಲ್ ದಾಖಲೆಗಳ ಗೊಂದಲ ಮತ್ತು ವಾಸ್ತವ: ಆಧಾರ್ ಕಾರ್ಡ್: ಇದು ಕೇವಲ ಭಾರತದಲ್ಲಿ ವಾಸಿಸುತ್ತಿರುವ ವ್ಯಕ್ತಿಯ ನಿವಾಸದ ಪುರಾವೆಯಾಗಿದೆಯೇ (Proof of Residence) ಹೊರತು ಪೌರತ್ವದ ಪುರಾವೆಯಲ್ಲ (Proof of Citizenship). ಪಾಸ್‌ಪೋರ್ಟ್: ಇದು ಕೇವಲ ಪ್ರಯಾಣದ ಸೌಲಭ್ಯಕ್ಕಾಗಿ ನೀಡುವ ದಾಖಲೆ. ಕಾನೂನುಬದ್ಧ ಪೌರತ್ವ ನಿರ್ಧಾರಕ್ಕೆ ಇವುಗಳಿಗಿಂತ ಹಳೆಯ ವಂಶಾವಳಿ ಹಾಗೂ ಜನನ ದಾಖಲೆಗಳೇ ನಿರ್ಣಾಯಕ ಎಂಬುದನ್ನು ಈ ಬೆಳವಣಿಗೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ➤ ನ್ಯಾಯಾಲಯಗಳ ಭಿನ್ನ ನಿಲುವುಗಳು: ಕೆಲವು ಸಿವಿಲ್ ಪ್ರಕರಣಗಳಲ್ಲಿ ಪಾಸ್‌ಪೋರ್ಟ್ ಅನ್ನು ವ್ಯಕ್ತಿಯ ರಾಷ್ಟ್ರೀಯತೆಯನ್ನು ಗುರುತಿಸಲು ಬಲವಾದ ಸಾಕ್ಷಿ ಎಂದು ಪರಿಗಣಿಸಲಾಗಿದೆ. ಆದರೆ, ದೇಶದ ಭದ್ರತೆಗೆ ಸಂಬಂಧಿಸಿದ ಅಕ್ರಮ ವಲಸಿಗರ (Illegal Migrants) ಪ್ರಕರಣಗಳಲ್ಲಿ ಪಾಸ್‌ಪೋರ್ಟ್ ಮತ್ತು ಜನನ ಪ್ರಮಾಣಪತ್ರಗಳಿದ್ದರೂ, ಸೂಕ್ತ ವಂಶಾವಳಿಯ ಲಿಂಕ್ ಇಲ್ಲದಿದ್ದರೆ ಪೌರತ್ವವನ್ನು ಸಾಬೀತುಪಡಿಸಲು ನ್ಯಾಯಾಲಯಗಳು ನಿರಾಕರಿಸಿದ ಉದಾಹರಣೆಗಳಿವೆ. ➤ ಭಾರತದಲ್ಲಿ 'ಪೌರತ್ವ ಪ್ರಮಾಣಪತ್ರ'ದ ಕೊರತೆ: ಪ್ರಸ್ತುತ ಭಾರತದಲ್ಲಿ ನೋಂದಣಿ ಅಥವಾ ನೈಸರ್ಗಿಕೀಕರಣದ (Naturalisation) ಮೂಲಕ ಪೌರತ್ವ ಪಡೆದ ಸೀಮಿತ ವಿದೇಶಿ ಜನರಿಗೆ ಮಾತ್ರ ಅಧಿಕೃತ 'ಪೌರತ್ವ ಪ್ರಮಾಣಪತ್ರ' (Citizenship Certificate) ಸಿಗುತ್ತದೆ. ಆದರೆ, ಶೇಕಡಾ 90ಕ್ಕೂ ಹೆಚ್ಚು ಸಹಜವಾಗಿ (ಜನನದ ಮೂಲಕ) ಪೌರತ್ವ ಪಡೆದ ಭಾರತೀಯರಿಗೆ ಇಂತಹ ಯಾವುದೇ ಒಂದೇ ಒಂದು ನಿರ್ದಿಷ್ಟ 'ಪೌರತ್ವ ಪ್ರಮಾಣಪತ್ರ' ಇಲ್ಲವೇ ಇಲ್ಲ! ಈ ಕೊರತೆಯನ್ನು ನೀಗಿಸಲು 'ರಾಷ್ಟ್ರೀಯ ಪೌರತ್ವ ನೋಂದಣಿ' (NRC) ಯೋಜನೆಯನ್ನು ತರಲು ಪ್ರಯತ್ನಿಸಲಾಯಿತಾದರೂ, ಅದು ದೇಶಾದ್ಯಂತ ಜಾರಿಗೆ ಬರಲಿಲ್ಲ. ಸದ್ಯಕ್ಕೆ ಭಾರತೀಯರು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಶಾಲಾ ಪ್ರಮಾಣಪತ್ರ (SSLC/TC), ಹಳೆಯ ಮತದಾನದ ಗುರುತಿನ ಚೀಟಿ ಮತ್ತು ತಂದೆ-ತಾತಂದಿರ ಭೂ ದಾಖಲೆಗಳಂತಹ ಹಳೆಯ ದಾಖಲೆಗಳ ಮೇಲೆಯೇ ಅವಲಂಬಿತರಾಗಬೇಕಿದೆ.KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ