➤ ಹೊಸ ಶೇ. 25 ಕನಿಷ್ಠ ಬ್ಯಾಲೆನ್ಸ್ ನಿಯಮ (25% Minimum Balance Rule): ಹೊಸ ಇಪಿಎಫ್ ನಿಯಮಗಳ ಪ್ರಕಾರ, ಯಾವುದೇ ಚಂದಾದಾರರು ತಮ್ಮ ಖಾತೆಯಿಂದ ಭಾಗಶಃ ಹಣವನ್ನು (Partial Withdrawal) ಹಿಂಪಡೆಯಬೇಕಾದರೆ, ಖಾತೆಯಲ್ಲಿ ಕನಿಷ್ಠ ಶೇಕಡಾ 25 ರಷ್ಟು ಹಣವನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕು.
- ಉದಾಹರಣೆಗೆ: ನಿಮ್ಮ ಇಪಿಎಫ್ ಖಾತೆಯಲ್ಲಿ ₹1 ಲಕ್ಷ ಇದ್ದರೆ, ನೀವು ಗರಿಷ್ಠ ₹75,000 ಮಾತ್ರ ಹಿಂಪಡೆಯಬಹುದು. ಉಳಿದ ₹25,000 ಖಾತೆಯಲ್ಲೇ ಇರಬೇಕು.
- ಇದು ಉದ್ಯೋಗಿ ಮತ್ತು ಉದ್ಯೋಗದಾತ (Employee & Employer) ಇಬ್ಬರ ಕೊಡುಗೆಗಳಿಗೂ ಅನ್ವಯಿಸುತ್ತದೆ.
- ಮನೆ ಮತ್ತು ವಸತಿ: ಸ್ವಂತ ಮನೆ ಅಥವಾ ಫ್ಲಾಟ್ ಖರೀದಿ, ನಿವೇಶನ ಖರೀದಿ, ಮನೆ ನಿರ್ಮಾಣ, ಗೃಹ ಸಾಲ ಮರುಪಾವತಿ ಮತ್ತು ತುರ್ತು ಮನೆ ದುರಸ್ತಿಗೆ ಹಣ ಪಡೆಯಬಹುದು.
- ವೈಯಕ್ತಿಕ ಮತ್ತು ಕುಟುಂಬದ ಅಗತ್ಯಗಳು: ಉನ್ನತ ಶಿಕ್ಷಣ, ಮದುವೆ ವೆಚ್ಚಗಳು ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಚಂದಾದಾರರು ತಮ್ಮ ಅರ್ಹ ಮೊತ್ತದ ಶೇ. 100 ರಷ್ಟು ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಗಿದೆ.
- ಸರಳ ಅರ್ಹತೆ: ಕೇವಲ 12 ತಿಂಗಳ (1 ವರ್ಷ) ಸೇವೆಯ ನಂತರ ಭಾಗಶಃ ಹಣವನ್ನು ಹಿಂಪಡೆಯಲು ಅವಕಾಶ ನೀಡಲಾಗಿದೆ. ಅಲ್ಲದೆ, ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ದಾಖಲೆಗಳು ಅಥವಾ ವಿವರಣೆಗಳನ್ನು ನೀಡುವ ಅಗತ್ಯವನ್ನು ತೆಗೆದುಹಾಕಲಾಗಿದೆ.
- UPI ಆಧಾರಿತ ಪಿಎಫ್ ಹಿಂಪಡೆಯುವಿಕೆ: ಇಪಿಎಫ್ ಇತಿಹಾಸದಲ್ಲೇ ಮೊದಲ ಬಾರಿಗೆ ಯುಪಿಐ (Unified Payments Interface) ತಂತ್ರಜ್ಞಾನದ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಇಪಿಎಫ್ ಹಣವನ್ನು ವರ್ಗಾಯಿಸುವ ವ್ಯವಸ್ಥೆಯನ್ನು ಪರೀಕ್ಷಿಸಲಾಗಿದೆ. ಇದು ಕ್ಲೈಮ್ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸಲಿದೆ.
- ವಾಟ್ಸಾಪ್ (WhatsApp) ಸೇವೆಗಳು: EPFO ನ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಕೇವಲ “Hello” ಎಂದು ಸಂದೇಶ ಕಳುಹಿಸುವ ಮೂಲಕ ಚಂದಾದಾರರು ಬ್ಯಾಲೆನ್ಸ್ ಪರಿಶೀಲನೆ, ಕೊನೆಯ 5 ವಹಿವಾಟುಗಳ ವಿವರ ಹಾಗೂ ಕ್ಲೈಮ್ ಸ್ಟೇಟಸ್ ಅನ್ನು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಸುಲಭವಾಗಿ ಪಡೆಯಬಹುದು.
ಜೂನ್ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ