Job Description: * ಪ್ರಸ್ತುತ ಗೂಗಲ್ ಸಂಸ್ಥೆಯೊಂದಿಗೆ 'ಕ್ಯೂ ಮ್ಯಾತ್' ಸಂಸ್ಥೆಯು "ಗೂಗಲ್ ಫಾರ್ ಎಜುಕೇಷನ್" ನೊಂದಿಗೆ ಪಾಲುದಾರಿಕೆಯನ್ನು ಪಡೆದಿದೆ. * ಈ "ಗೂಗಲ್ ಫಾರ್ ಎಜುಕೇಷನ್" ನಿಂದಾಗಿ ಬೋಧನಾ ಹಾಗೂ ಕಲಿಯುವ ಅನುಭವದಲ್ಲಿ ಬದಲಾವಣೆ ತರಲು ಕೆ-12 ತರಗತಿಗಳ ಶಾಲಾ-ನಂತರ ಮ್ಯಾತ್ ಮತ್ತು ಕೋಡಿಂಗ್ ಪ್ರೋಗ್ರಾಂಗಳಿಗಾಗಿ ಕ್ಯೂಮ್ಯಾತ್ "ಗೂಗಲ್ ಫಾರ್ ಎಜುಕೇಷನ್"ನೊಂದಿಗೆ ಕೈಜೋಡಿಸಿದೆ, ಈ ಕ್ಯೂ ಮ್ಯಾತ್ ಸಂಸ್ಥೆಯು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ 'ಗೂಗಲ್ ಫಾರ್ ಎಜುಕೇಷನ್' ಎಂಬ ಪ್ರಮಾಣಪತ್ರವನ್ನು ಒದಗಿಸಿಕೊಡುತ್ತದೆ. * ಈ ಕ್ಯೂ ಮ್ಯಾತ್'ನ ಸಂಸ್ಥಾಪಕ ಹಾಗೂ CEO ಮನನ್ ಖುರ್ಮಾ ಅವರು ಈ ಪಾಲುದಾರಿಕೆಯ ವಿಷಯದ ಬಗ್ಗೆ ಮಾತನಾಡಿದರು, ಈ 'ಗೂಗಲ್ ಫಾರ್ ಎಜುಕೇಷನ್’ ನೊಂದಿಗಿನ ನಾವು ಸಹಭಾಗಿತ್ವವನ್ನು ಹೊಂದಿದ್ದೇವೆ ಇದರಿಂದಾಗಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡಲು ಮತ್ತು ನೈಜ-ಪ್ರಪಂಚದ ಕೌಶಲ್ಯಗಳ ಸಾಮರ್ಥ್ಯಗಳನ್ನು ಹೆಚ್ಚಿಸಲು ಅವಕಾಶವನ್ನು ನೀಡುವದರ ಜೊತೆಗೆ ಪ್ರತಿ ವಿದ್ಯಾರ್ಥಿಯ ಗಣಿತ ವಿಷಯದಲ್ಲಿ ಉತ್ತಮ ಜ್ಞಾನ ಪಡೆಯುವುದಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಕಲಿಕೆಯ ನಿರ್ವಹಣಾ ವ್ಯವಸ್ಥೆಗಳು ಮತ್ತು ಸ್ಮಾರ್ಟ್ ತರಗತಿಗಳು ಈ ಪ್ರೋಗ್ರಾಂನಲ್ಲಿ ಇರಲಿವೆ ಎಂದು ಕ್ಯೂ ಮ್ಯಾತ್ ತಿಳಿಸಿದೆ. * ಈ ಗೂಗಲ್ ಫಾರ್ ಎಜುಕೇಷನ್’ನಲ್ಲಿ 3ಗಂಟೆಗಳ ಅವಧಿಗೆ ಪರೀಕ್ಷೆ ಇರುತ್ತದೆ, ಈ ಕ್ಯೂ ಮ್ಯಾತ್ ಕೋಡಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಗೂಗಲ್'ನ ಸಿಎಸ್ ಮೊದಲ ಪಠ್ಯಕ್ರಮವನ್ನು ಬೋಧಿಸಲಾಗುತ್ತದೆ ಎಂದು ತಿಳಿಸಿದೆ.