Job Description: * ಖಾಸಗಿ ಕಂಪನಿಗಳಿಗೆ ಖಾದಿ ಹೆಸರು ಬಳಸಲು ಅನುಮತಿ ಇಲ್ಲ ಪ್ರಸ್ತುತ ಖಾದಿ ಮತ್ತು ಗುಡಿ ಕೈಗಾರಿಕೆಗಳ ಆಯೋಗವು ಖಾದಿ ಮೇಲಿನ ಮಾಲಿಕತ್ವ ಹೊಂದಿದೆ ಎಂದು ನ್ಯಾಯಮಂಡಳಿಯು ಅಧಿಕೃತ ತೀರ್ಪು ನೀಡಿದೆ. * ಪ್ರಸ್ತುತ ದೆಹಲಿ ಮೂಲದ ಜಿತೇಂದ್ರ ಜೈನ್ ಮತ್ತು ಅವರ ಅಸೋಸಿಯೆಟ್ಸ್ನವರು ಖಾದಿಡಾಟ್ಇನ್ ವೆಬ್ಸೈಟ್'ನ್ನು ಆರಂಭಿಸಿದ್ದರು, ಈ ಸಂಧರ್ಭದಲ್ಲಿ ಖಾದಿ ಪದವನ್ನು ಖಾಸಗಿ ಸಂಸ್ಥೆಗಳು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಬಾರದು ಎಂದು ಖಾದಿ ಆಯೋಗವು ಈ ವೆಬ್ಸೈಟ್'ನ್ನು ಪ್ರಶ್ನೆ ಮಾಡಿ ನ್ಯಾಯಮಂಡಳಿ ಮೊರೆ ಹೋಗಲಾಗಿತ್ತು, ಅರ್ಜಿ ವಿಚಾರಣೆ ಮಾಡಿದ ಐಎನ್ಡಿಆರ್ಪಿ ನ್ಯಾಯಮಂಡಳಿಯು ಮಹತ್ವದ ತೀರ್ಪು ನೀಡಿದೆ. * ಅದುವೇ ಯಾವುದೇ ಖಾಸಗಿ ಸಂಸ್ಥೆಗಳು ಖಾದಿ ಹೆಸರಿನ ಮೇಲೆ ಮಾಲಿಕತ್ವ(ಅಧಿಕಾರ) ಚಲಿಸಲು ಅವಕಾಶ ಇರುವದಿಲ್ಲ, ಅದು ಸಂಪೂರ್ಣ ಖಾದಿ ಇಂಡಿಯಾದ ಮೇಲೆ ಖಾದಿ ಆಯೋಗ ಸಂಪೂರ್ಣ ಮಾಲಿಕತ್ವ(ಅಧಿಕಾರ) ಹೊಂದಿದೆ ಎಂದು ನ್ಯಾಯಮಂಡಳಿಯು ಮಹತ್ವದ ತೀರ್ಪು ನೀಡಿದೆ.