Job Description: ➤ ಇತ್ತೀಚಿನ ವರದಿಗಳ ಪ್ರಕಾರ (ಜುಲೈ 2026), ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ (DAY-NRLM) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ eSARAS ವೇದಿಕೆಯು ದೇಶದ ಗ್ರಾಮೀಣ ಕುಶಲಕರ್ಮಿಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಗೆ (SHGs) ಹೊಸ ಆರ್ಥಿಕ ಶಕ್ತಿಯನ್ನು ನೀಡುತ್ತಿದೆ. ಪ್ರಸ್ತುತ ಈ ವೇದಿಕೆಯ ಮೂಲಕ 8.62 ಕೋಟಿಗೂ ಹೆಚ್ಚು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ತಮ್ಮದೇ ಆದ ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿದ್ದಾರೆ.➤ ಇ-ಸರಸ್ (eSARAS): eSARAS ಎಂಬುದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಒಂದು ಅಧಿಕೃತ ಆನ್‌ಲೈನ್ ಇ-ಕಾಮರ್ಸ್ ಮಾರುಕಟ್ಟೆಯಾಗಿದೆ. ಉದ್ದೇಶ: ಗ್ರಾಮೀಣ ಪ್ರದೇಶದ ಮಹಿಳಾ ಸ್ವಸಹಾಯ ಗುಂಪುಗಳು (SHG) ಮತ್ತು ಅವರ ಒಕ್ಕೂಟಗಳು ತಯಾರಿಸುವ ಉತ್ಪನ್ನಗಳಿಗೆ ನೇರ ರಾಷ್ಟ್ರೀಯ ಮಾರುಕಟ್ಟೆ ಒದಗಿಸುವುದು, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದು ಹಾಗೂ ಬ್ರ್ಯಾಂಡಿಂಗ್ ಮತ್ತು ಲಾಜಿಸ್ಟಿಕ್ಸ್ (ಸಾಗಣಿಕೆ) ಬೆಂಬಲ ನೀಡುವುದು. ಪ್ರಾರಂಭ: ಇದನ್ನು 28 ಅಕ್ಟೋಬರ್ 2022 ರಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ (Digital India Corporation) ಅಭಿವೃದ್ಧಿಪಡಿಸಿತು. ➤ ವೇದಿಕೆಯ ಪ್ರಮುಖ ವಿಕಸನ ಮತ್ತು ಮೈಲಿಗಲ್ಲುಗಳು:eSARAS ಪೋರ್ಟಲ್ ಮತ್ತು ಮೊಬೈಲ್ ಆಪ್: ಸ್ವಸಹಾಯ ಗುಂಪುಗಳ ಉತ್ಪನ್ನಗಳ ಪರಿಣಾಮಕಾರಿ ಮಾರಾಟಕ್ಕಾಗಿ ಪ್ರತ್ಯೇಕ ಆಪ್ ಮತ್ತು ಪ್ಯಾಕೇಜಿಂಗ್ ಹಾಗೂ ಶಿಪ್ಪಿಂಗ್ ಬೆಂಬಲ ನೀಡುವ 'ಫುಲ್‌ಫಿಲ್‌ಮೆಂಟ್ ಸೆಂಟರ್' ಸ್ಥಾಪನೆ.ONDC ಸಂಯೋಜನೆ: ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ನೊಂದಿಗೆ ಜೋಡಣೆಯಾಗಿದ್ದು, ಇದರ ಮೂಲಕ 11 ಕ್ಕೂ ಹೆಚ್ಚು ಬೈಯರ್ ಆಪ್‌ಗಳ ಮೂಲಕ 20 ಕೋಟಿಗೂ ಹೆಚ್ಚು ಸಂಭಾವ್ಯ ಗ್ರಾಹಕರನ್ನು ತಲುಪಲು ಸಾಧ್ಯವಾಗಿದೆ.UMANG ಪ್ಲಾಟ್‌ಫಾರ್ಮ್: ಸರ್ಕಾರದ ಪ್ರಮುಖ ಆಪ್ ಆದ ಉಮಾಂಗ್ (UMANG) ನಲ್ಲೂ ಇ-ಸರಸ್ ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.ಸರಸ್ ಶಕ್ತಿ ಕಲೆಕ್ಷನ್ (SARAS Shakti Collection) ಸಾಂಸ್ಥಿಕ ಮತ್ತು ಕಾರ್ಪೊರೇಟ್ ಖರೀದಿದಾರರನ್ನು ಸೆಳೆಯಲು 'ರಾಷ್ಟ್ರೀಯ ಗ್ರಾಮೀಣ ವಿಕಾಸ ಸಮ್ಮೇಳನ 2026' ರಲ್ಲಿ ಪ್ರೀಮಿಯಂ ಉಡುಗೊರೆ ಸಂಗ್ರಹವನ್ನು ಪರಿಚಯಿಸಲಾಗಿದೆ.ಸರಸ್ ಆಜೀವಿಕಾ ಗ್ಯಾಲರಿ: ನವದೆಹಲಿಯ ಬಾಬಾ ಖರಕ್ ಸಿಂಗ್ ಮಾರ್ಗ್‌ನಲ್ಲಿ ಸ್ವಸಹಾಯ ಗುಂಪುಗಳ ಅತ್ಯುತ್ತಮ ಹ್ಯಾಂಡ್‌ಕ್ರಾಫ್ಟ್ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಖಾಯಂ ಗ್ಯಾಲರಿಯನ್ನು ಸ್ಥಾಪಿಸಲಾಗಿದೆ.ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ