➤ ಕರೋನಲ್ ಮಾಸ್ ಎಜೆಕ್ಷನ್ (ICME): ಸೂರ್ಯನ ಬಾಹ್ಯ ವಾತಾವರಣದಿಂದ (ಕರೋನಾ) ಅತಿ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುವ ಕಾಂತೀಯ ಪ್ಲಾಸ್ಮಾದ (Magnetized Plasma) ಭಾರಿ ಸ್ಪೋಟಗಳನ್ನು ಕರೋನಲ್ ಮಾಸ್ ಎಜೆಕ್ಷನ್ ಎನ್ನಲಾಗುತ್ತದೆ. ಇವು ಭೂಮಿಯ ಕಾಂತಕ್ಷೇತ್ರವನ್ನು ತಲುಪಿದಾಗ ಭೂಕಾಂತೀಯ ಬಿರುಗಾಳಿಗಳನ್ನು (Geomagnetic Storms) ಸೃಷ್ಟಿಸುತ್ತವೆ.
➤ ಇದರಿಂದಾಗುವ ಪರಿಣಾಮಗಳು:
- ಉಪಗ್ರಹಗಳ (Satellites) ಕಾರ್ಯನಿರ್ವಹಣೆಗೆ ಅಡ್ಡಿ.
- ಜಿಪಿಎಸ್ (GPS) ಮತ್ತು ರೇಡಿಯೋ ಸಂವಹನ ವ್ಯವಸ್ಥೆ ಏರುಪೇರು.
- ವಿದ್ಯುತ್ ಗ್ರಿಡ್‌ಗಳು (Power Grids) ಮತ್ತು ವಿಮಾನಯಾನ ಮಾರ್ಗಗಳಿಗೆ ಹಾನಿ.
- ಭೂಮಿಯ ಧ್ರುವ ಪ್ರದೇಶಗಳಲ್ಲಿ ಅದ್ಭುತವಾದ ಧ್ರುವಪ್ರಭೆ (Auroras) ಸೃಷ್ಟಿಯಾಗುವುದು.
ಗಮನಿಸಿ: ಸೂರ್ಯನ ಚಟುವಟಿಕೆಗಳು ಪ್ರತಿ 11 ವರ್ಷಗಳಿಗೊಮ್ಮೆ ಗರಿಷ್ಠ ಮಟ್ಟವನ್ನು (Solar Maxima) ತಲುಪುತ್ತವೆ. ಪ್ರಸ್ತುತ ನಡೆಯುತ್ತಿರುವ 25ನೇ ಸೌರ ಚಕ್ರವು (Solar Cycle 25) 2025 ರಲ್ಲಿ ತನ್ನ ಗರಿಷ್ಠ ಮಟ್ಟವನ್ನು ತಲುಪಿತ್ತು.
- ಉಷ್ಣತೆಯ ಸಕ್ರಿಯ ಬದಲಾವಣೆ (Active Heating): ಈ ಹಿಂದೆ ಸೌರ ಜ್ವಾಲೆಗಳು ಸೂರ್ಯನಿಂದ ದೂರ ಸರಿದಂತೆ ತಣ್ಣಗಾಗುತ್ತವೆ (Cooling) ಎಂದು ಭಾವಿಸಲಾಗಿತ್ತು. ಆದರೆ ಈ ಸಂಶೋಧನೆಯು ಶೇ. 45 ರಷ್ಟು ICME ಗಳು ಭೂಮಿಯ ಸಮೀಪ ಬರುವಾಗಲೂ ಉಷ್ಣತೆಯನ್ನು ಪಡೆದುಕೊಳ್ಳುತ್ತವೆ (Heating Signature) ಎಂಬುದನ್ನು ಸಾಬೀತುಪಡಿಸಿದೆ.
- ಪಾಲಿಟ್ರೋಪಿಕ್ ಸೂಚ್ಯಂಕ (Polytropic Index): ವಿಜ್ಞಾನಿಗಳು ಉಪಗ್ರಹಗಳ ದತ್ತಾಂಶ ಬಳಸಿ ಪ್ಲಾಸ್ಮಾದ ಒತ್ತಡ, ತಾಪಮಾನ ಮತ್ತು ಸಾಂದ್ರತೆಯ ಬದಲಾವಣೆಯನ್ನು ಅಳೆಯಲು 'ಪಾಲಿಟ್ರೋಪಿಕ್ ಸೂಚ್ಯಂಕ'ವನ್ನು ಬಳಸಿದ್ದಾರೆ.
- ಸೌರ ಚಕ್ರಗಳ ನಡುವಿನ ವ್ಯತ್ಯಾಸ: ಸೌರ ಚಕ್ರ 23 ರಲ್ಲಿ ಹೆಚ್ಚಿನ ಉಷ್ಣತೆಯ ಸ್ಥಿತಿ ಕಂಡುಬಂದರೆ, ಸೌರ ಚಕ್ರ 24 ರಲ್ಲಿ ತಂಪಾಗುವ ಪ್ರಕ್ರಿಯೆ ಹೆಚ್ಚಾಗಿ ಕಂಡುಬಂದಿದೆ. ಇದು ಸೌರ ಕಾಂತೀಯ ವಾತಾವರಣದ ಜಾಗತಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ.
- ಭೂಕಾಂತೀಯ ಬಿರುಗಾಳಿಗಳ ತೀವ್ರತೆ: ಅತ್ಯಂತ ತೀವ್ರವಾದ ಭೂಕಾಂತೀಯ ಬಿರುಗಾಳಿಗಳು ಸಾಮಾನ್ಯವಾಗಿ 'ಹೀಟಿಂಗ್ ಸ್ಟೇಟ್' (ಕಡಿಮೆ ಗಾಮಾ ಸೂಚ್ಯಂಕ) ಹೊಂದಿರುವ ICME ಗಳಲ್ಲೇ ಕಂಡುಬರುತ್ತವೆ ಎಂದು ಸಂಶೋಧನೆ ಹೇಳಿದೆ.