Job Description: * ಮೊದಲ ಬಾರಿ ಬಾಕ್ಸಿಂಗ್ ಕ್ರೀಡೆಯಲ್ಲಿ ದ್ರೋಣಾಚಾರ್ಯ ಪ್ರಶಸ್ತಿಯನ್ನು ಪಡೆದ ಕೋಚ್ ಓ.ಪಿ. ಭಾರದ್ವಾಜ್ ಅವರು ತಮ್ಮ 82ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. * ಭಾರದ್ವಾಜ್ ಅವರಿಗೆ 1985ರಲ್ಲಿ ಮೊದಲ ಬಾರಿ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಿತ್ತು, ಇದೆ ಸಂದರ್ಭದಲ್ಲಿ ಬಾಲಚಂದ್ರ ಭಾಸ್ಕರ್ ಭಾಗವತ್ ಅವರಿಗೆ ಕುಸ್ತಿಯಲ್ಲಿ, ಮತ್ತು ಓ.ಎಂ.ನಂಬಿಯಾರ್ ಅವರಿಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಈ ಪುರಸ್ಕಾರ ಲಭಿಸಿದೆ. * ಭಾರದ್ವಾಜ್ ಅವರು 1968 ರಿಂದ 1989ರ ವರೆಗೆ ರಾಷ್ಟ್ರೀಯ ತಂಡಕ್ಕೆ ಕೋಚ್ ಆಗಿದ್ದರು, ಪ್ರಸ್ತುತ ಇವರ ಮಾರ್ಗದರ್ಶನದಲ್ಲಿ ಬಾಕ್ಸರ್ಗಳು ಏಷ್ಯನ್, ಕಾಮನ್ವೆಲ್ತ್ ಮತ್ತು ದಕ್ಷಿಣ ಏಷ್ಯಾ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದು ಕೀರ್ತಿ ಪಾತ್ರರಾಗಿದ್ದಾರೆ. * ಪ್ರಸ್ತುತ ಭಾರದ್ವಾಜ್ ಅವರು ಪಟಿಯಾಲದ ನ್ಯಾಷನಲ್ ಸ್ಪೋರ್ಟ್ಸ್ ಇನ್ಸ್ಟಿಟ್ಯೂಷನ್'ನಲ್ಲಿ ಬಾಕ್ಸಿಂಗ್ ಡಿಪ್ಲೊಮಾ ಕೋಚಿಂಗ್ ಕೋರ್ಸ್ ನಡೆಸಿದ್ದರು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ 2008ರಲ್ಲಿ 2 ತಿಂಗಳ ಅವಧಿಗೆ ಬಾಕ್ಸಿಂಗ್'ನ ಕೆಲ ತಂತ್ರಗಳನ್ನು ಕಳಿಸಿದ್ದರು.