Job Description: * ಅಮೇರಿಕಾ ದೇಶವು ಭಾರತದೇಶಕ್ಕೆ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇಲ್ಲಿಯವರೆಗೆ ₹ 3,656 ಕೋಟಿಗಿಂತಲೂ (500 ದಶಲಕ್ಷ ಡಾಲರ್) ಹೆಚ್ಚಿನ ಸಾಮಗ್ರಿಗಳನ್ನು ನೀಡಲಾಗಿದೆ ಎಂದು ಶ್ವೇತಭವನವು ತಿಳಿಸಿದೆ. * ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರು ವರ್ಚುವಲ್ ಸುದ್ದಿವಾಹಿನಿಯ ಮೂಲಕ ನೀಡಿರುವ ಮಾಹಿತಿ ಪ್ರಕಾರ ಅಮೆರಿಕದ ಒಕ್ಕೂಟ ಸರ್ಕಾರಗಳು ಹಾಗೂ ವಿವಿಧ ರಾಜ್ಯ ಸರ್ಕಾರಗಳು ಕೂಡ ಪರಿಹಾರ ನೀಡಿವೆ, ಜೊತೆಗೆ ಕಂಪನಿಗಳು ಮತ್ತು ಸಂಘಟನೆಗಳು ಕೂಡ ಭಾರತಕ್ಕೆ ನೆರವಿನ ಹಸ್ತ ನೀಡಿವೆ. * ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಅನೇಕ ದೇಶಗಳು ಕಷ್ಟ ಪಡುತ್ತಿವೆ, ಸದ್ಯ ಅಮೇರಿಕ ರಾಷ್ಟ್ರವು ಭಾರತ ಅಷ್ಟೇ ಅಲ್ಲದೆ ವಿಶ್ವದ ಅನೇಕ ರಾಷ್ಟ್ರಗಳು ಸಹಾಯಸ್ತ ನೀಡಿದೆ ಎಂದು ಅಧ್ಯಕ್ಷ ಜೋ ಬೈಡನ್ ಅವರು ತಿಳಿಸಿದ್ದಾರೆ.