Job Description: * ಇತ್ತೀಚಿಗೆ ಕೇರಳ ರಾಜ್ಯದ ವಿಧಾನಸಭೆಗೆ 140 ಸದಸ್ಯರನ್ನು ಆಯ್ಕೆ ಮಾಡಲು 2021ರ ಕೇರಳ ವಿಧಾನಸಭಾ ಚುನಾವಣೆಯನ್ನು ಏಪ್ರಿಲ್ 6, 2021 ರಂದು ಕೇರಳದಲ್ಲಿ ನಡೆಸಲಾಯಿತು. * ಕೇರಳ ರಾಜ್ಯದ 2021ನೇ ವಿಧಾನಸಭೆಯ ಚುನಾವಣೆಯಲ್ಲಿ LDF ಪಕ್ಷವು 99 ಸ್ಥಾನಗಳಲ್ಲಿ ಗೆದ್ದು ಅಧಿಕಾರವನ್ನು ಪಡೆದಿದೆ. * ಪಿಣರಾಯಿ ವಿಜಯನ್ ಅವರು ಕೇರಳ ರಾಜ್ಯದ ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂ ಪ್ರದೇಶದಲ್ಲಿ ಕೋವಿಡ್-19 ಮಾರ್ಗಸೂಚಿಗಳ ಪ್ರಕಾರ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ನಡೆಸಿದರು. * ಪ್ರಸ್ತುತ ಕೇರಳ ರಾಜ್ಯದ LDF ಪಕ್ಷದ ಮುಖ್ಯಸ್ಥರಾಗಿರುವ ಪಿಣರಾಯಿ ವಿಜಯನ್ ಅವರು 2ನೇ ಬಾರಿಗೆ ಕೇರಳ ರಾಜ್ಯದ ಮುಖ್ಯ ಮಂತ್ರಿಯಾಗಿ ಅಧಿಕಾರವನ್ನು ಸ್ವೀಕಾರ ಮಾಡಿದರು. * ಕೇರಳ ರಾಜ್ಯದ ರಾಜ್ಯಪಾಲರಾಗಿರುವ ಆರಿಫ್ ಮೊಹಮ್ಮದ್ ಖಾನ್'ಅವರು LDF ಪಕ್ಷದ ಪಿಣರಾಯಿ ವಿಜಯನ್' ಅವರಿಗೆ ಪ್ರಮಾಣ ವಚನವನ್ನು ಭೋಧಿಸಿದರು.