Job Description: * ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರಿಗೆ ಮಾರ್ಚ ತಿಂಗಳಿನ ಐಸಿಸಿ ಆಟಗಾರರ ಪ್ರಶಸ್ತಿ ಲಭಿಸಿದೆ. * ICC ನೀಡುವ ತಿಂಗಳ ಆಟಗಾರ ಪ್ರಶಸ್ತಿಯನ್ನು ಸತತ ಮೂರನೇ ಬಾರಿಗೆ ಭಾರತೀಯ ಆಟಗಾರರು ಪಡೆದುಕೊಂಡಿದ್ದಾರೆ. * ಇತ್ತೀಚೆಗೆ ಇಂಗ್ಲೆಂಡ್ ವಿರುದ್ದದ ಟಿ-20 ಮತ್ತು ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಆಟವಾಡಿದ 31 ವರ್ಷದ ಭುವನೇಶ್ವರ್ ಕುಮಾರ್'ಗೆ ಈ ಪ್ರಶಸ್ತಿ ಲಭಿಸಿದೆ. * ಭುವನೇಶ್ವರ್ ಕುಮಾರ್'ಅವರು ಏಕದಿನ ಪಂದ್ಯಗಳಲ್ಲಿ 6 ವಿಕೆಟ್ಗಳನ್ನು ಪಡೆದಿದ್ದರೆ, ಮತ್ತು ಟಿ20 ಸರಣಿಯಲ್ಲಿ 4 ವಿಕೆಟ್ಗಳನ್ನು ಪಡೆದುಕೊಂಡು ಭಾರತದ ಸರಣಿ ಗೆಲುವಿನಲ್ಲಿ ಪ್ರಮುಖರಾಗಿದ್ದಾರೆ. ಭುವನೇಶ್ವರ್ ಕುಮಾರ್ : * ಭುವನೇಶ್ವರ್ ಕುಮಾರ್ ಅವರು ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದಾರೆ. * ಅವರು ದೇಶೀಯ ಕ್ರಿಕೆಟ್ನಲ್ಲಿ ಉತ್ತರ ಪ್ರದೇಶ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಾರೆ. * ಜನನ: 5 ಫೆಬ್ರವರಿ 1990 (ವಯಸ್ಸು 31 ವರ್ಷ), ಮೀರತ್ * ಟೆಸ್ಟ್ ಚೊಚ್ಚಲ : 22 ಫೆಬ್ರವರಿ 2013 ವಿ ಆಸ್ಟ್ರೇಲಿಯಾ * ಏಕದಿನ ಚೊಚ್ಚಲ: 30 ಡಿಸೆಂಬರ್ 2012 (ಪಾಕಿಸ್ತಾನ ವಿರುದ್ಧ) * ಟಿ 20 ಚೊಚ್ಚಲ: 25 ಡಿಸೆಂಬರ್ 2012 (ಪಾಕಿಸ್ತಾನ ವಿರುದ್ಧ)