Job Description: * ಕೇಂದ್ರ ಸರ್ಕಾರವು ಲಕ್ಷದ್ವೀಪ ಹಾಗೂ ಜಮ್ಮು ಕಾಶ್ಮೀರದ ಬಡ್ಗಾಮ್ ಜಿಲ್ಲೆಯನ್ನು ಕ್ಷಯರೋಗ ಮುಕ್ತ ಪ್ರದೇಶಗಳು ಎಂದು ಘೋಷಿಸಿದೆ, ಮತ್ತು 2025ರ ಅವಧಿಗೆ ಭಾರತ ಕ್ಷಯರೋಗ (TB) ಮುಕ್ತವಾಗಲು ಇದು ನಾಂದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ತಿಳಿಸಿದ್ದಾರೆ. * ವಿಶ್ವದ ಟಿಬಿ ಪ್ರಕರಣಗಳಲ್ಲಿ ಭಾರತವು ಶೇಕಡಾ 30 ರಷ್ಟಿದೆ. * ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, 2025ರ ವೇಳೆಗೆ ಕ್ಷಯರೋಗವನ್ನು ಕೊನೆಗೊಳಿಸಲು ಹೆಚ್ಚಿನ ಆದ್ಯತೆಯನ್ನು ನೀಡಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ.