Job Description: * ಏಪ್ರಿಲ್ 15 ರಿಂದ ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್'ರವರು ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. * ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್'ರವರು ಇದೆ ಏಪ್ರಿಲ್ 16 ರಂದು ಭಾರತದ ವಿದೇಶಾಂಗ ಸಚಿವರಾದ ಡಾ.ಎಸ್.ಜೈಶಂಕರ್ ಅವರನ್ನು ಭೇಟಿ ಮಾಡಲಿದ್ದಾರೆ. * ಭಾರತ ಮತ್ತು ಮಾಲ್ಡೀವ್ಸ್ ವಿದೇಶಾಂಗ ಸಚಿವರಿಬ್ಬರು ಪರಸ್ಪರ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. * ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯದ ಪ್ರಕಾರ, ಸಚಿವ ಅಬ್ದುಲ್ಲಾ ಶಾಹಿದ್'ಅವರು ಸಾಂಕ್ರಾಮಿಕದ ಬಳಿಕ ಜಾಗತಿಕ ಸಾರ್ವಜನಿಕ ಆರೋಗ್ಯದ ಸೆಷನ್ಗಳಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾರತದೊಂದಿಗೆ ಸಂವಾದದಲ್ಲಿ ನಡೆಸಲಿದ್ದಾರೆ. ಮಾಲ್ಡೀವ್ಸ್ ದೇಶದ ಬಗ್ಗೆ ಮಾಹಿತಿ : * ಮಾಲ್ಡೀವ್ಸ್ ಅಥವಾ ಮಾಲ್ಡೀವ್ಸ್ ದ್ವೀಪಗಳು ಅಧಿಕೃತವಾಗಿ ಮಾಲ್ಡೀವ್ಸ್ ಗಣರಾಜ್ಯಕ್ಕೆ ಒಳಪಡುತ್ತವೆ, ಇದು ಹಿಂದೂ ಮಹಾಸಾಗರದಲ್ಲಿರುವ ದ್ವೀಪಗಳ ದೇಶವಾಗಿದೆ. * ಭಾರತದ ಲಕ್ಷದ್ವೀಪದ ಎರಡು ಭಾಗದಲ್ಲಿ ದಕ್ಷಿಣೋತ್ತರವಾಗಿ ಇರುವ ಮಿನಿಕೊಯ್ ದ್ವೀಪ ಮತ್ತು ಚಾಗೋಸ್ ಆರ್ಚಿಪೆಲಾಗೊಗಳ ಮಧ್ಯೆ ಇಪ್ಪತ್ತಾರು ಹವಳದ್ವೀಪಗಳು ದ್ವಿಮುಖ ಸರಪಳಿಯ ರೂಪದಲ್ಲಿ ಹರಡಿಕೊಂಡಿವೆ. * ಇದು ಲಕ್ಯಾಡಿವ್ ಸಮುದ್ರದಲ್ಲಿದೆ, ಶ್ರೀಲಂಕಾದ ನೈಋತ್ಯ ಭಾಗದಲ್ಲಿ ಸುಮಾರು ಏಳು ನೂರು ಕಿ.ಮೀ (435 mi)ದೂರದಲ್ಲಿದೆ. * ಮಾಲ್ಡೀವ್ಸ್ನ ಹವಳದ್ವೀಪ 90,000 ಚದರ ಕಿ.ಮೀ ಭೂಪ್ರದೇಶದಲ್ಲಿ ಹರಡಿಕೊಂದಿದೆ, * ಇದು ಮುಖ್ಯವಾಗಿ ಎರಡುನೂರು ವಸಾಹತುಗಳನ್ನು ಹಾಗೂ 1,192 ಕಿರು ದ್ವೀಪಗಳನ್ನು ಒಳಗೊಂಡಿದೆ. * ಮಾಲ್ಡೀವ್ಸ್ ಗಣರಾಜ್ಯದ ರಾಜಧಾನಿ ಹಾಗೂ ದೊಡ್ಡ ನಗರ(2006) ರ ಗಣತಿ ಪ್ರಕಾರ 1,03,693 ಜನಸಂಖ್ಯೆ ಹೊಂದಿದೆ. * ಇದು ಕಾಪು ಹವಳದ್ವೀಪದಲ್ಲಿ ಉತ್ತರ ಮಲ್ ಹವಳದ್ವೀಪದ ದಕ್ಷಿಣದ ತುದಿಯಲ್ಲಿದೆ. * ಇದು ಜಗತ್ತಿನಲ್ಲಿಯೇ ಅತಿ ತಳಮಟ್ಟದ ಎತ್ತರದ ಪ್ರದೇಶವನ್ನು ಹೊಂದಿದ ದೇಶವಾಗಿದೆ.