Job Description: * ಈ ಹಿಂದೆ ಸರಿ ಸುಮಾರು ಒಂದು ವಾರಗಳ ಸುಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿರುವ ಎವರ್ ಗಿವನ್ ಹಡಗಿಗೆ ಸುಮಾರು 900 ಮಿಲಿಯನ್ ಡಾಲರ್ ದಂಡವನ್ನು ಸುಯೆಜ್ ಕಾಲುವೆ ಪ್ರಾಧಿಕಾರ ವಿಧಿಸಿದೆ, ಮತ್ತು ವಿಧಿಸಿದ ದಂಡ ಪಾವತಿಸುವವರೆಗೂ ಎವರ್ ಗಿವನ್ ನೌಕೆಯನ್ನು ಬಿಡುಗಡೆ ಮಾಡಲಾಗುವದಿಲ್ಲವೆಂದು ಸುಯೆಜ್ ಕಾಲುವೆ ಪ್ರಾಧಿಕಾರವು ತಿಳಿಸಿದೆ. * ಈ ಎವರ್ ಗಿವನ್ ನೌಕೆಯ ಸುಯೆಜ್ ಕಾಲುವೆ ಸಿಲುಕಿಕೊಂಡಿರುವದರಿಂದ ಕಾಲುವೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿತ್ತು ಇದರಿಂದ 420ಕ್ಕೂ ಹೆಚ್ಚು ಹಡಗುಗಳು ಸಂಚಾರಕ್ಕೆ ಅಡಚಣೆಯಾಗಿತ್ತು. * ಎವರ್ ಗಿವನ್ ನೌಕೆಯಿಂದಾಗಿ ಈಜಿಪ್ಟ್'ಗೆ ಪ್ರತೀನಿತ್ಯ 90ರಿಂದ 112 ಕೋಟಿ ರೂ.ಗಳಷ್ಟು ನಷ್ಟವಾಗಿದೆ, ಹಾಗೂ ಈ ಕಾಲುವೆ ನಿರ್ವಹಣ ವೆಚ್ಚವನ್ನು ಎವರ್ ಗಿವನ್ ಕಂಪೆನಿ ಪಾವತಿಸಬೇಕು ಎಂದು ಸುಯೇಜ್ ಕಾಲುವೆ ಪ್ರಾಧಿಕಾರ ಮುಖ್ಯಸ್ಥ ಒಸಾಮಾ ರಾಬೀ ಹೇಳಿದ್ದಾರೆ. ಎವರ್ ಗಿವನ್ ಹಡಗಿನ ಬಗ್ಗೆ ಮಾಹಿತಿ : * ಎವರ್ ಗಿವನ್ ವಿಶ್ವದ ಅತಿದೊಡ್ಡ ಕಂಟೇನರ್ ಹಡಗುಗಳಲ್ಲಿ ಒಂದಾಗಿದೆ. * ಈ ಹಡಗು ಶೋಯಿ ಕಿಸೆನ್ ಕೈಶಾ ಅವರ ಒಡೆತನದಲ್ಲಿದೆ, ಮತ್ತು ಸಮಯವನ್ನು ಚಾರ್ಟರ್ಡ್ ಮತ್ತು ಕಂಟೇನರ್ ಟ್ರಾನ್ಸ್ಪೋರ್ಟ್ ಮತ್ತು ಶಿಪ್ಪಿಂಗ್ ಕಂಪನಿ ಎವರ್ಗ್ರೀನ್ ಮೆರೈನ್ ನಿರ್ವಹಿಸುತ್ತದೆ. * ಬಿಲ್ಡರ್: ಇಮಾಬರಿ ಶಿಪ್ ಬಿಲ್ಡಿಂಗ್ * ಸಾಮರ್ಥ್ಯ: 20,124 ಟಿಇಯು * ಮಾಲೀಕ: ಶೋಯಿ ಕಿಸೆನ್ ಕೈಶಾ * ಸಿಬ್ಬಂದಿ: 25 * ಉದ್ದ: 399.94 ಮೀ (1,312 ಅಡಿ 2 ಇಂಚು)