Job Description: * ಕಾಂಗ್ರೆಸ್ ತನ್ನ ಡಿಜಿಟಲ್ ಮೀಡಿಯಾ ಪ್ಲಾಟ್ಫಾರ್ಮ್ ಇಂಕ್ ಟಿವಿ ದಾಖಲೆಯನ್ನು ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಂದು ಬಿಡುಗಡೆಗೊಳಿಸಿದೆ. * ಪಂಚಾಯತಿ ರಾಜ್ ದಿನ'ದಂದು ಡಿಜಿಟಲ್ ಮೀಡಿಯಾ ಪ್ಲಾಟ್ಫಾರ್ಮ್ ಇಂಕ್ ಟಿವಿಯನ್ನು ಪ್ರಾರಂಭಿಸಲಾಗುವುದು ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕರ್ಜುನ್ ಖರ್ಗೆ ಹಾಗೂ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಲಾ ಅವರು ತಿಳಿಸಿದರು. * ಡಿಜಿಟಲ್ ಪ್ಲಾಟ್ಫಾರ್ಮ್ 8ಗಂಟೆಗಳ ಲೈವ್ ಪ್ರೋಗ್ರಾಮಿಂಗ್ ಅನ್ನು ಏಪ್ರಿಲ್ 24 ರಿಂದ ಪ್ರಸಾರ ಮಾಡುತ್ತದೆ, ಪ್ರಾರಂಭದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆ ಮಾತ್ರ ಬಳಸಲಾಗಿದೆ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲೂ ಪ್ರಸಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಸ್ಯಾಟಲೈಟ್ ಅಥವಾ OTTಯಲ್ಲಿ ಇರುವುದಿಲ್ಲ ಎಂದು ಸುರ್ಜೆವಾಲಾ ಮಾಹಿತಿ ನೀಡಿದ್ದಾರೆ.