Job Description: * ದೇಶದಲ್ಲಿ ಉಗ್ರರರೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಅಡಿಯಲ್ಲಿ ಇಸ್ಲಾಮಿಕ್ ಸ್ಟೇಟ್ (ISIS) ಮತ್ತು ಅಲ್ ಖೈದಾ ಸೇರಿದಂತೆ 11 ಇಸ್ಲಾಮಿಕ್ ಸಂಘಟನೆಗಳನ್ನು ಶ್ರೀಲಂಕಾ ಸರ್ಕಾರವು ನಿಷೇಧಿಸಿದೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. * ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ'ರವರು "ಭಯೋತ್ಪಾದನೆ ತಡೆ ಕಾಯ್ದೆ'ಯಡಿ ಈ 11 ಉಗ್ರಗಾಮಿ ಸಂಘಟನೆಗಳನ್ನು ವಿಶೇಷ ಗೆಜೆಟ್ ಅಧಿಸೂಚನೆಯಲ್ಲಿ ನಿಷೇಧಿಸಿದ್ದಾರೆ. * ಈ ಕಾಯ್ದೆ ಉಲ್ಲಂಘಿಸಿದ ಸಂಘಟನೆಗಳಿಗೆ 10 ರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. * ಶ್ರೀಲಂಕಾ ಸರ್ಕಾರವು ಈ ಹಿಂದೆ 2019ರಲ್ಲಿ ನಡೆದ ಈಸ್ಟರ್ ಸಂಡೆ ಆತ್ಮಾಹುತಿ ಬಾಂಬ್ ದಾಳಿಯ ನಂತರ ಸ್ಥಳೀಯ ಜಿಹಾದಿ ಗುಂಪು ನ್ಯಾಷನಲ್ ಥೌಹೀತ್ ಜಮಾಥ್ ಮತ್ತು ಇತರ ಎರಡು ಉಗ್ರ ಸಂಘಟನೆಗಳ ಸಂಪರ್ಕ ಹೊಂದಿದ ಸಂಘಟನೆಗಳಿಗೆ ನಿಷೇದ ಹೇರಿತ್ತು. ಶ್ರೀಲಂಕಾ ಸರ್ಕಾರದ ಬಗ್ಗೆ ಮಾಹಿತಿ : * ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ (1972 ರ ಶ್ರೀಲಂಕಾ ದ ಮೊದಲು ಹೆಸರು ಸಿಲೋನ್) ಭಾರತೀಯ ಉಪಖಂಡದ ಆಗ್ನೇಯದಲ್ಲಿರುವ ದ್ವೀಪ ರಾಷ್ಟ್ರ. * ಪುರಾತನ ಕಾಲದಿಂದ ಲಂಕಾ, ಲಂಕಾದ್ವೀಪ, ಸಿಂಹಳದ್ವೀಪ, ಸೆರೆಂದಿಬ್ ಮೊದಲಾದ ಹೆಸರುಗಳಿಂದ ಗುರುತಿಸಲ್ಪಟ್ಟಿರುವ ಶ್ರೀಲಂಕಾ 1972 ರಲ್ಲಿ ಬ್ರಿಟಿಷ್ ಆಡಳಿತದ ಕಾಲದಲ್ಲಿ ಸಿಲೋನ್ ಎಂದು ಹೆಸರು ಪಡೆದಿತ್ತು. * ರಾಜಧಾನಿ : ಶ್ರೀ ಜಯವರ್ಧನಾಪುರ * ರಾಷ್ಟ್ರಪತಿ : ಮಹಿಂದ ರಾಜಪಕ್ಸ * ಪ್ರಧಾನ ಮಂತ್ರಿ : ರತ್ನಸಿರಿ ವಿಕ್ರಮನಾಯಕೆ