Job Description: * ಹಾಂಗ್ಕಾಂಗ್ ಚೀನಾಗೆ ಹೆಚ್ಚಿನ ನಿಯಂತ್ರಣದ ಅಧಿಕಾರ ನೀಡುವ ಚುನಾವಣಾ ಸುಧಾರಣಾ ಮಸೂದೆಯನ್ನು ಶಾಸನಸಭೆಯಲ್ಲಿ ಮಂಡನೆ ಮಾಡಿದೆ. * ಸಂವಿಧಾನದ ಕಾರ್ಯದರ್ಶಿ ಎರಿಕ್ ಟ್ಸಾಂಗ್ ಹೇಳಿಕೆ ನೀಡಿರುವ ಪ್ರಕಾರ ಹಾಂಗ್ಕಾಂಗ್'ನ ಆಡಳಿತವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಮಸೂದೆ ರೂಪಿಸಿ ಶಾಸನಸಭೆಯಲ್ಲಿ ಮಂಡಿಸಲಾಗಿದೆ, ಹಾಗೂ ಈ ಮಸೂದೆಗೆ ಮೇ ತಿಂಗಳ ಅಂತ್ಯಕ್ಕೆ ಅನುಮೋದನೆ ಸಿಗಲಿದೆ ಎನ್ನಲಾಗಿದೆ. * ಹಾಂಗ್ಕಾಂಗ್ನಲ್ಲಿ ರಾಜಕೀಯ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶವೂ ಈ ಮಸೂದೆ ಹೊಂದಿದೆ. * ಈ ಹಿಂದೆ ಚೀನಾ ಹಾಂಗ್ಕಾಂಗ್ನಲ್ಲಿ ರಾಷ್ಟ್ರೀಯ ಭದ್ರತೆ ಕಾನೂನು ಜಾರಿಗೆ ತಂದಿತ್ತು, ಆದಾಗ್ಯೂ 2019ರಲ್ಲಿಯೂ ಪ್ರಜಾಪ್ರಭುತ್ವದ ಪರ ವ್ಯಾಪಕ ಪ್ರತಿಭಟನೆಗಳಾಗಿದ್ದವು. * ಹೊಸದಾಗಿ ಮಂಡನೆ ಮಾಡಿರುವ ಮಸೂದೆಯ ಅನ್ವಯ 20 ಮಂದಿಯನ್ನು ಮಾತ್ರ ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ, ಮತ್ತು 30 ಪ್ರತಿನಿಧಿಗಳನ್ನು ವಿವಿಧ ವೃತ್ತಿಗಳಲ್ಲಿರುವವರು ಗುಂಪುಗಳಿಂದ ಆಯ್ಕೆ ಮಾಡಲಾಗುತ್ತದೆ ಹಾಗೂ 40 ಮಂದಿಯನ್ನು ಚುನಾವಣೆ ಸಮಿತಿ ಆಯ್ಕೆ ಮಾಡಲಿದೆ ಎಂದು ಈ ಮಸೂದೆ ತಿಳಿಸಿದೆ. ಹಾಂಗ್ಕಾಂಗ್ ಬಗ್ಗೆ ಮಾಹಿತಿ : * ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧಿಕೃತವಾಗಿ ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶವಾದವಾಗಿದೆ. * ಡಯಲಿಂಗ್ ಕೋಡ್: +852 * ಜನಸಂಖ್ಯೆ: 75.1 ಲಕ್ಷ (2019) * ಕರೆನ್ಸಿ: ಹಾಂಗ್ ಕಾಂಗ್ ಡಾಲರ್ * ಖಂಡ: ಏಷ್ಯಾ