Job Description: * ಜೋ- ಬೈಡನ್ ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹಿಂಪಡೆದುಕೊಳ್ಳಲು ನಿರ್ಧರಿಸಿದ್ದಾರೆ. * ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಯ 20 ನೇ ವಾರ್ಷಿಕೋತ್ಸವಕ್ಕೂ ಮುಂಚಿತವಾಗಿ ಅಫ್ಘಾನಿಸ್ತಾನದಿಂದ ಅಮೆರಿಕದ ಸೈನ್ಯವನ್ನು ಹಿಂಪಡೆದುಕೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧರಿಸಿದ್ದಾರೆ ಎಂದು ವಾಷಿಂಗ್ಟನ್'ನ ವರದಿಯಲ್ಲಿ ತಿಳಿದು ಬಂದಿದೆ. * ಅಮೇರಿಕದಲ್ಲಿ 2001ರ ಸೆಪ್ಟೆಂಬರ್ 11ನಲ್ಲಿ ನಡೆದ ಭಯೋತ್ವಾದಕ ದಾಳಿಯಲ್ಲಿ 3000ಕ್ಕೂ ಹೆಚ್ಚು ಜನ ಸಾವನ್ನಪಿದ್ದರು. * 2001ರಲ್ಲಿ ಇಸ್ಲಾಮಿಕ್ ಉಗ್ರಗಾಮಿ ಗುಂಪು ಅಲ್-ಖೈದಾದೊಂದಿಗೆ ಸಂಬಂಧ ಹೊಂದಿರುವ 19 ಉಗ್ರರ ವಿಮಾನಯಾನ ಅಪಹರಣಗಳು ಮತ್ತು ಆತ್ಮಹತ್ಯಾ ದಾಳಿಗಳುನ್ನು ಮಾಡಿದ್ದರು. * US ಇತಿಹಾಸದಲ್ಲಿ ಅಮೆರಿಕಾದ ನೆಲದ ಮೇಲೆ ಮಾಡಿದ ಮಾರಕ ಭಯೋತ್ಪಾದಕ ದಾಳಿ ಇದಾಗಿದೆ. ಜೋ- ಬೈಡನ್ ರವರ ಬಗ್ಗೆ ಮಾಹಿತಿ : * ಜೋ- ಬೈಡನ್ ನವೆಂಬರ್ 20, 1942 ರಂದು ಜನಿಸಿದರು * ಜೋ- ಬೈಡನ್ ಒಬ್ಬ ಅಮೇರಿಕನ್ ರಾಜಕಾರಣಿಯಾಗಿದ್ದು, ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ ನ 46ನೇ ಮತ್ತು ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. * ಇವರು ಡೆಮಾಕ್ರಟಿಕ್ ಪಕ್ಷದ ಸದಸ್ಯರಾಗಿದ್ದರು ಅವರು 2009 ರಿಂದ 2017 ರವರೆಗೆ ಬರಾಕ್ ಒಬಾಮರ ಅಡಿಯಲ್ಲಿ 47 ನೇ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.