Job Description: * ಪ್ರಸ್ತುತ ಸರ್ಕಾರವು ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮತ್ತು ಜಲ ಸಂರಕ್ಷಣೆಗಾಗಿ ಜಲಶಕ್ತಿ ಅಭಿಯಾನ ಎಂಬ ಯೋಜನೆಯನ್ನು ದೇಶ್ಯಾದ್ಯಂತ ಜಾರಿಗೆಗೊಳಿಸಿದೆ. * ಈ ಜಲಶಕ್ತಿ ಅಭಿಯಾನ ಯೋಜನೆಯಿಂದ ರಾಷ್ಟ್ರದ ಗ್ರಾಮೀಣ ಪ್ರದೇಶಗಳ ಜನಗಳು ಎದುರಿಸುತ್ತಿರುವ ನೀರಿನ ಸಮಸ್ಯೆ ಮತ್ತು ಕೃಷಿ ಚಟುವಟಿಕೆಗಳಿಗೆ ಬೇಕಾಗಿರುವ ನೀರು ಮತ್ತು ಕುಡಿಯುವ ನೀರಿನ ಕೊರತೆಯನ್ನು ನಿವಾರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. * ಕೇಂದ್ರ ಸರ್ಕಾರವು ಜಲಶಕ್ತಿ ಅಭಿಯಾನ- ಕ್ಯಾಚ್ ದಿ ರೇನ್ ಎಂಬ ಅಭಿಯಾನವನ್ನು ಮಾರ್ಚ್.22 ರಿಂದ ನವೆಂಬರ್.30ರವರೆಗೆ ಹಮ್ಮಿಕೊಳ್ಳಲು ಪ್ರಧಾನಿ ಮೋದಿಯವರು ನಿರ್ದೇಶನ ನೀಡಿದ್ದಾರೆ. * ಮಳೆ ನೀರು ಸಂರಕ್ಷಣೆಗೆ ಗ್ರಾಮದ ವ್ಯಾಪ್ತಿಯಲ್ಲಿರುವ ಕೆರೆ, ಕಲ್ಯಾಣಿಗಳ ಸಮಗ್ರ ಅಭಿವೃದ್ಧಿ, ನೀರು ಹರಿದು ಹೋಗುವ ಕಾಲುವೆಗಳ ಸ್ವಚ್ಚಿಕರಣಕ್ಕೆ ನರೇಗಾ ಯೋಜನೆ ಅಡಿಯಲ್ಲಿ ಅವಕಾಶ ನೀಡಲಾಗಿದೆ. * ಈ ಜಲಶಕ್ತಿ ಅಭಿಯಾನದ ಅಡಿಯಲ್ಲಿ ಒಟ್ಟು 141 ಕೆರೆ, 160 ಕಾಲುವೆ ಸ್ವಚ್ಛತೆ, 20 ಕಿಂಡಿ ಆಣೆಕಟ್ಟು ನಿರ್ಮಾಣ, 50 ಬೋರ್ವೆಲ್, ಮತ್ತು 1,455 ನೀರಾವರಿ ಬಾವಿ ನಿರ್ಮಾಣದ ಗುರಿ ಹೊಂದಿದೆ ಎಂದು ಸರ್ಕಾರ ತಿಳಿಸಿದೆ.