Job Description: * ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಭಾರತ ದೇಶಾದ್ಯಂತ ಏಪ್ರಿಲ್ 14ರಂದು ಆಚರಿಸಲಾಗುತ್ತಿದೆ. * ಈ ವರ್ಷ ಏಪ್ರಿಲ್ 14ರಂದು ಸಂವಿಧಾನ ಶಿಲ್ಪಿ ಎಂದೇ ಪ್ರಖ್ಯಾತಿಯಾಗಿರುವ ಡಾ. ಬಿ ಆರ್ ಅಂಬೇಡ್ಕರ್'ಅವರ 130ನೇ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. * ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಹಿಂದುಳಿದ ವರ್ಗದವರನ್ನು ಉತ್ತಮ ಸ್ಥಿತಿಗೆ ತರಲು ಹೋರಾಟ ನಡೆಸಿ ಅದರಲ್ಲಿ ಯಶಸ್ಸು ಕಂಡಿದ್ದಾರೆ ಮತ್ತು ತಮ್ಮ ಜೀವನದ ಕೊನೆಯ ಹಂತದವರೆಗೂ ನ್ಯಾಯಯುತ ಸಮಾಜವನ್ನು ರಚಿಸಲು ಹೋರಾಡಿದ ವ್ಯಕ್ತಿ ಇವರಾಗಿದ್ದಾರೆ. * ಸಂವಿಧಾನ ಶಿಲ್ಪಿ ಭೀಮರಾವ್ ರಾಮ್ಜಿ ಅಂಬೇಡ್ಕರ್ ಅವರು ಭಾರತೀಯ ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಸಾಮಾಜಿಕ ಸುಧಾರಕರಾಗಿದ್ದರು ಮತ್ತು ದಲಿತ ಬೌದ್ಧ ಚಳವಳಿಗೆ ಪ್ರೇರಣೆ ನೀಡಿದರು ಮತ್ತು ಅಸ್ಪೃಶ್ಯರ ಬಗ್ಗೆ ಸಾಮಾಜಿಕ ತಾರತಮ್ಯದ ವಿರುದ್ಧ ಪ್ರಚಾರ ಮಾಡಿದರು. ಡಾ. ಬಿ ಆರ್ ಅಂಬೇಡ್ಕರ್ ರವರ ಬಗ್ಗೆ ಮಾಹಿತಿ : * ಜನನ: 14 ಏಪ್ರಿಲ್ 1891, ಮಹೌ (Mhow, Indore) * ನಿಧನ: 6 ಡಿಸೆಂಬರ್ 1956, ದೆಹಲಿ * ಪೂರ್ಣ ಹೆಸರು: ಭೀಮರಾವ್ ರಾಮ್ಜಿ ಅಂಬೇಡ್ಕರ್ * ಶಿಕ್ಷಣ: ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ (1916-1922)