Job Description: * ಭಾರತದ ಸುಪ್ರೀಂ ಕೋರ್ಟ್ ನ 48 ನೇ ಮುಖ್ಯ ನ್ಯಾಯಮೂರ್ತಿಯಾಗಿ ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಾದೀಶರಾದ ಎನ್ ವಿ ರಮಣ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇತ್ತೀಚಿಗೆ ಅಂಕಿತ ಹಾಕಿದ್ದಾರೆ. * ಎನ್ ವಿ ರಮಣ ಅವರು ಇದೆ ಏಪ್ರಿಲ್ 24ರಂದು ಪ್ರಮಾಣವಚನ ಸ್ವೀಕರಿಸುವರು. * ಪ್ರಸ್ತುತ ಈ ಹುದ್ದೆಯಲ್ಲಿರುವ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರು ಏಪ್ರಿಲ್ 23ರಂದು ನಿವೃತ್ತಿಯಾಗುತ್ತಿರುವ ಹಿನ್ನಲೆ, ರಮಣ ರವರು ಹುದ್ದೆಗೆ ಆಯ್ಕೆಯಾಗಿದ್ದಾರೆ. * ಎನ್ ವಿ ರಮಣ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ 2022 ರ ಆಗಸ್ಟ್ 26 ರವರೆಗೆ ಅಧಿಕಾರದಲ್ಲಿರುವರು. * ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂ ಗ್ರಾಮದಲ್ಲಿ ದಿನಾಂಕ 1957ರ ಆಗಸ್ಟ್ 27ರಂದು ಜನಿಸಿದರು. ಹಾಗು 1983ರ ಫೆಬ್ರುವರಿ 10 ರಿಂದ ತಮ್ಮ ವಕೀಲರಾಗಿ ವೃತ್ತಿ ಆರಂಭಿಸಿದ್ದರು.