Job Description: * ಪ್ರಸ್ತುತ ರಷ್ಯಾ ಅಧ್ಯಕ್ಷರಾಗಿರುವ ವ್ಲಾಡಿಮಿರ್ ಪುಟಿನ್ ಅವರು ಇನ್ನು 15 ವರ್ಷಗಳ ಕಾಲ ತಾವು ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡುವಂತಹ ಕಾನೂನಿಗೆ ಇತ್ತೀಚಿಗೆ ಸಹಿ ಹಾಕಿರುವುದಾಗಿ ವರದಿಯಾಗಿದೆ. * ಈ ಮೂಲಕ ಪುಟಿನ್ ಅವರು 6 ವರ್ಷ ಆಡಳಿತ ಅವಧಿಯನ್ನು ಎರಡು ಬಾರಿ ಪಡೆದುಕೊಳ್ಳಲಿದ್ದಾರೆ. ಅಂದರೆ ಇವರು 2036 ವರೆಗೂ ರಷ್ಯಾ ಅಧ್ಯಕ್ಷರಾಗಿ ಮುಂದುವರೆಯುವ ಸಾಧ್ಯತೆ ಇದೆ. * ಪ್ರಸ್ತುತ 68 ವರ್ಷದ ಪುಟಿನ್ ರವರು 20ಕ್ಕೂ ಹೆಚ್ಚು ಸಮಯದಿಂದ ರಷ್ಯಾ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವ ಸಾಧ್ಯತೆ ಇದೆ . * ಪುಟಿನ್ ಅವರ ಈ ನೂತನ ಕಾನೂನಿಗೆ ರಷ್ಯಾ ದೇಶದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದು ಸಾಂವಿಧಾನಿಕ ಧಂಗೆ ಎಂದು ಟೀಕಿಸಲಾಗುತ್ತಿದೆ. ರಷ್ಯಾ ದೇಶದ ಬಗ್ಗೆ ಮಾಹಿತಿ : * ರಷ್ಯಾದ ಒಕ್ಕೂಟವು ಪೂರ್ವ ಯುರೋಪ್ ಮತ್ತು ಉತ್ತರ ಏಷ್ಯಾದಲ್ಲಿ ವ್ಯಾಪಿಸಿರುವ ಖಂಡಾಂತರ ದೇಶವಾಗಿದೆ. * ಅಧ್ಯಕ್ಷ: ವ್ಲಾಡಿಮಿರ್ ಪುಟಿನ್ ಟ್ರೆಂಡಿಂಗ್ * ರಾಜಧಾನಿ: ಮಾಸ್ಕೋ * ಜನಸಂಖ್ಯೆ: 14.44 ಕೋಟಿ (2019) * ಕರೆನ್ಸಿ: ರಷ್ಯನ್ ರೂಬಲ್ * ಖಂಡ: ಯುರೋಪ್, ಏಷ್ಯಾ