Job Description: * ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳು 2022 ರ ತಾತ್ಕಾಲಿಕ ಪಟ್ಟಿಗೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಲೇಪಾಕ್ಷಿಯಲ್ಲಿ ಬೃಹತ್‌ ನಂದಿ ವಿಗ್ರಹ ಒಳಗೊಂಡಿರುವ ಪ್ರಸಿದ್ಧ ವೀರಭದ್ರ ಸ್ವಾಮಿ ದೇವಾಲಯವು ಸೇರ್ಪಡೆಯಾಗಿದೆ. * ಈ ಲೇಪಾಕ್ಷಿ ದೇವಾಲಯವು 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿದೆ. ಈ ದೇವಾಲಯವು ವಿಜಯನಗರ ವಾಸ್ತುಶೈಲಿಯನ್ನು ಪ್ರತಿಬಿಂಬಿಸುವ ಅದ್ಭುತ ಶಿಲ್ಪಕಲೆಯನ್ನು ಹೊಂದಿದೆ. ಈ ದೇವಾಲಯದ ಸುಮಾರು 250 ಮೀ. ದೂರದಲ್ಲಿ ಕುಳಿತ ಭಂಗಿಯಲ್ಲಿರುವ ಏಕಶಿಲಾ ನಂದಿ ವಿಗ್ರಹವು ಲೇಪಾಕ್ಷಿ ನಂದಿ ಎಂದೇ ಜನಪ್ರಿಯವಾಗಿದೆ, ಹಾಗೂ ಈ ವಿಗ್ರಹವು '06' ಮೀ. ಎತ್ತರವಿದೆ. * ಈ ವೀರಭದ್ರ ದೇವಸ್ಥಾನವು ಭಾರತದ ಆಂಧ್ರಪ್ರದೇಶ ರಾಜ್ಯದ ಲೇಪಾಕ್ಷಿಯಲ್ಲಿರುವ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ರಾಷ್ಟ್ರೀಯ ಪ್ರಾಮುಖ್ಯತೆಯ ಕೇಂದ್ರೀಯವಾಗಿ ಸಂರಕ್ಷಿತ ಸ್ಮಾರಕಗಳಲ್ಲಿ ಒಂದಾಗಿದೆ. ಈ ದೇವಾಲಯವು ಕರ್ನಾಟಕದ ಗಡಿಗೆ ಸಮೀಪದಲ್ಲಿರುವುದರಿಂದ ಅನೇಕ ಕನ್ನಡ ಶಾಸನಗಳಿಗೆ ಈ ದೇವಾಲಯ ನೆಲೆಯಾಗಿದೆ.