Job Description: * ಪ್ರಸ್ತುತ ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ಮಾರ್ಚ್‌. 28ರಂದು ಮೊದಲ ಬಾರಿಗೆ ಅತಿ ಹೆಚ್ಚು ವಿಮಾನಗಳು ಸಂಚಾರ ನಡೆಸಿವೆ, ಇದೀಗ ಈ ವಿಮಾನ ನಿಲ್ದಾಣದ ಇತಿಹಾಸದಲ್ಲಿ ಮಾರ್ಚ್‌. 28 ರಂದು ಜನನಿಬೀಡ ದಿನ ಎಂದೇ ವರದಿ ಮಾಡಲಾಗಿದೆ. * ಇತ್ತೀಚಿಗೆ ಮಾರ್ಚ್‌ 28ರಂದು ಈ ವಿಮಾನ ನಿಲ್ದಾಣದಲ್ಲಿ 90 ವಿಮಾನಗಳು ಹಾರಾಟ ನಡೆಸಿವೆ, ಅವುಗಳಲ್ಲಿ ಸುಮಾರು 15,014 ಮಂದಿ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಯಾಗಿದೆ. ಹಾಗೆಯೇ ಅದೇ ದಿನದಂದು ಬೇರೆ ಬೇರೆ ಪ್ರದೇಶಗಳಿಂದ 45 ವಿಮಾನಗಳಲ್ಲಿ7,824 ಜನರು ಶ್ರೀನಗರಕ್ಕೆ ಪ್ರಯಾಣಿಸಿದ್ದಾರೆ. ಹಾಗೂ 45 ವಿಮಾನಗಳಲ್ಲಿ ಸುಮಾರು 7,190 ಜನರು ಶ್ರೀನಗರ ವಿಮಾನ ನಿಲ್ದಾಣದಿಂದ ಬೇರೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. * ಪ್ರಸ್ತುತ ಈ ಶ್ರೀನಗರ ವಿಮಾನ ನಿಲ್ದಾಣದಿಂದ ಈ ರೀತಿಯ ದಾಖಲೆ ಸಂಖ್ಯೆಯಲ್ಲಿ ವಿಮಾನಗಳು ಕಾರ್ಯನಿರ್ವಹಿಸಿರುವದು ಇದೇ ಮೊದಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಶರದ್‌ ಕುಮಾರ್‌ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. * ಪ್ರಸ್ತುತ ಶ್ರೀನಗರ ವಿಮಾನ ನಿಲ್ದಾಣವನ್ನು ಶೇಖ್ ಉಲ್-ಆಲಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದೂ ಕರೆಯಲಾಗುತ್ತದೆ. ಹಾಗೂ ಬುಡ್ಗಾಮ್ ಏರ್‌ಬೇಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ಹಿಂದೆ 2005 ರಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪರಿಚಯಿಸಿ, ಗೋ ಫಸ್ಟ್ ಶಾರ್ಜಾಕ್ಕೆ ಕೆಲ ತಿಂಗಳುಗಳ ಸಮಯದವರೆಗೆ ಕಾರ್ಯಾಚರಣೆ ನಡೆಸಲಾಯಿತು. ಹಾಗೂ ನಂತರ ಆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಏರ್ ಇಂಡಿಯಾ ಹಜ್ ವಿಮಾನಗಳನ್ನು ನಿರ್ವಹಣೆ ಮಾಡಿತು.