Job Description: * ಮಹಾರಾಷ್ಟ್ರದ ರೋಹಾ ಹಾಗೂ ಕರ್ನಾಟಕದ ಥೋಕೂರ್ ನಡುವಿನ 741 ಕಿ.ಮೀ. ಮಾರ್ಗದಲ್ಲಿ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಿದೆ ಎಂದು ಕೊಂಕಣ ರೈಲ್ವೇ ಕಾರ್ಪೊರೇಷನ್ ಈ ಬಗ್ಗೆ ವರದಿ ಮಾಡಿದೆ. * ವಿದ್ಯುದೀಕರಣವು ಇಂಧನದ ಮೇಲೆ 150 ಕೋಟಿ ರೂ. ಉಳಿತಾಯವನ್ನು ತರಲಿದೆ, ಹಾಗೂ ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ, ಇದರ ಜೊತೆಗೆ ತಡೆರಹಿತ ಹಾಗೂ ಮಾಲಿನ್ಯ-ಮುಕ್ತ ಕಾರ್ಯಾಗಳನ್ನು ನಡೆಸಲಿದೆ ಎಂದು ಕೊಂಕಣ ರೈಲ್ವೇ ಕಾರ್ಪೊರೇಷನ್ ತಿಳಿಸಿದೆ. * ರತ್ನಗಿರಿ ಹಾಗೂ ಥಿವಿಮ್ ಮಧ್ಯದ ಕೊನೆಯ ವಿಭಾಗದ ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆಯನ್ನು ಈ ಹಿಂದೆ ಮಾರ್ಚ್. 24 ರಂದು ಕೈಗೊಳ್ಳಲಾಗಿತ್ತು ಹಾಗೂ ಮಾರ್ಚ್. 28 ರಂದು ಅಧಿಕಾರವನ್ನು ಪಡೆದು ಕೊಳ್ಳಲಾಗಿತ್ತು. ಸಂಪೂರ್ಣ ಕೊಂಕಣ ರೈಲ್ವೆ ಮಾರ್ಗದ ಸಿಆರ್‌ಎಸ್ ತಪಾಸಣೆ ಮಾರ್ಚ್‌'ನಲ್ಲಿ ಸುಮಾರು '06' ಹಂತಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಈ ವಿದ್ಯುದ್ದೀಕರಣ ಯೋಜನೆಯನ್ನು ಈ ಹಿಂದೆ 2015 ರ ನವೆಂಬರ್‌ನಲ್ಲಿ ಆರಂಭಿಸಲಾಗಿತ್ತು, ಇದಕ್ಕೆ ಒಟ್ಟಾರೆಯಾಗಿ 1,287 ಕೋಟಿ ರೂ. ವೆಚ್ಚವನ್ನು ಭರಿಸಲಾಗಿದೆ. * ಕೊಂಕಣ ರೈಲ್ವೇ ಕಾರ್ಪೊರೇಶನ್ ಲಿಮಿಟೆಡ್ (KRCL) ನವಿ ಮುಂಬೈನ CBD ಬೇಲಾಪುರದಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಹಾಗೂ ಇದು ಸಾರ್ವಜನಿಕ ವಲಯದ ಉದ್ಯಮವಾಗಿದೆ, ಪ್ರಸ್ತುತ KRCL'ನ ರೈಲ್ವೆ ಮಾರ್ಗವು ಭಾರತದ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ರಾಜ್ಯಗಳ ಕರಾವಳಿ ಜಿಲ್ಲೆಗಳನ್ನು ಒಳಗೊಂಡಿದೆ. ಈ ಹಿಂದೆ 1998 ಜನವರಿ. 26 ರಂದು KRCL ಕಂಪನಿಯು ತನ್ನ ಸಂಪೂರ್ಣ ರೈಲುಗಳ ಕಾರ್ಯಾಚರಣೆಯನ್ನು ಆರಂಭಿಸಿದೆ. ಇದಾದ ಬಳಿಕ ಕೊಂಕಣ ರೈಲು ಹಳಿಗಳ ಮೇಲೆ 1993 ಮಾರ್ಚ್. 20 ರಂದು ಉಡುಪಿ ಹಾಗೂ ಮಂಗಳೂರು ನಡುವೆ ಓಡಿದ ಮೊದಲ ಪ್ರಯಾಣಿಕ ರೈಲಾಗಿದೆ.