Job Description: * ಇತ್ತೀಚಿಗೆ ರಷ್ಯಾ ದೇಶದ ಜೊತೆಗೆ ಒಂದು ತಿಂಗಳಿಂದ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಪಟ್ಟಿರುವ ವೈರಲ್ ವೀಡಿಯೊಗಳ ಪಟ್ಟಿಯನ್ನು ಉಕ್ರೇನ್'ನ ರಕ್ಷಣಾ ಇಲಾಖೆ ಬಿಡುಗಡೆಗೊಳಿಸಿದೆ ಇದೀಗ ಪ್ರಶಸ್ತಿಯನ್ನು ಘೋಷಿಸಿದೆ. * ರಷ್ಯಾ ಹೆಲಿಕಾಪ್ಟರ್'ನ್ನು ಸ್ಟ್ರಿಂಜರ್ ಕ್ಷಿಪಣಿ ಧ್ವಂಸಗೊಳಿಸುವ ವೀಡಿಯೊಗೆ ಅತ್ಯುತ್ತಮ ಸಿನಿಮಾ ಛಾಯಾಗ್ರಹಣ ವಿಭಾಗದ ಅಡಿಯಲ್ಲಿ ದೃಶ್ಯಕ್ಕೆ ಪುರಸ್ಕಾರ ದೊರಕಿದೆ. ಹಾಗೆಯೇ ಹಾನಿಗೊಳಗಾಗಿರುವ ರಷ್ಯಾದ ಸೇನಾ ವಾಹನವನ್ನು ಟ್ರ್ಯಾಕ್ಟರ್ ಮೇಲೇರಿಸಿಕೊಂಡು ಬೇರೆಕಡೆಗೆ ರವಾನಿಸುವ ವೀಡಿಯೊಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ. * ಉಕ್ರೇನ್ನ ಯೋಧರು ಸ್ನೇಕ್ ಐಲ್ಯಾಂಡ್(snake iland)ವನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ತೋರಿರುವ ಧೈರ್ಯದ ವೀಡಿಯೊಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದೆ. * ಪ್ರಸ್ತುತ ರಷ್ಯಾ ದೇಶವು ಉಕ್ರೇನ್'ನ ಮೂಲಸೌಕರ್ಯ ಹಾಗೂ ವಸತಿ ಪ್ರದೇಶಗಳನ್ನು ಪೂರ್ಣವಾಗಿ ನಾಶಗೊಳಿಸುವ ಪ್ರಯತ್ನದ ಅಂಗವಾಗಿ ಕ್ಷಿಪಣಿ ಹಾಗೂ ಬಾಂಬ್ ದಾಳಿ ಮುಂದುವರಿಸಿದೆ ಎಂದು ಉಕ್ರೇನ್ ದೇಶವು ರಷ್ಯಾ ದೇಶದ ಮೇಲೆ ಆರೋಪವನ್ನು ಮಾಡಿದೆ.