Job Description: * ಬ್ಲೂ ಒರಿಜಿನ್ 2022ರ ಮೊದಲ ಬಾಹ್ಯಾಕಾಶ ಪ್ರವಾಸೋದ್ಯಮ ಉಡಾವಣೆ ಮಾಡಿದೆ, ಇದೀಗ ತನ್ನ ಮೊದಲ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ '06' ಪ್ರವಾಸಿಗರನ್ನು ರವಾನಿಸಿದೆ. * ಬಾಹ್ಯಾಕಾಶ ನೌಕೆಯು ಆ '06' ಜನರನ್ನು ಗ್ರಹದ ಹೊರಗೆ ಒಂದು ಸಂಕ್ಷಿಪ್ತ ಜಾಯ್ ರೈಡ್'ಗೆ ಕರೆದುಕೊಂಡು ಹೋಗಿದೆ. ಈ ಬಾಹ್ಯಾಕಾಶ ನೌಕೆಯು ಗ್ರಹದ ಮೇಲ್ಮೈಯಿಂದ 100 ಕಿ.ಮೀ. ಎತ್ತರಕ್ಕೆ ಸಾಗಿದಂತೆ ಅವರಿಗೆ ತೂಕವಿಲ್ಲದ ಹಾಗೂ ಶೂನ್ಯ-ಗುರುತ್ವಾಕರ್ಷಣೆಯ ಕ್ಷಣಗಳನ್ನ ನೀಡಿದೆ. ಹಾಗೆಯೇ ಬಾಹ್ಯಾಕಾಶದ ಗಡಿ ಎಂದು ಗುರುತಿಸಲಾಗಿರುವ ಕರಾಮನ್ ರೇಖೆಯನ್ನ ಬಾಹ್ಯಾಕಾಶ ನೌಕೆ ಸ್ಪರ್ಶಿಸುತ್ತಿದ್ದಂತೆ ಪ್ರಯಾಣಿಕರು ಕೆಲವು ಕ್ಷಣಗಳ ಕಾಲ ಶೂನ್ಯ ಗುರುತ್ವಾಕರ್ಷಣೆಯಲ್ಲಿ ತೇಲಿದರು. * ನ್ಯೂ ಶೆಪರ್ಡ್ ಬಾಹ್ಯಾಕಾಶ ನೌಕೆಯು ಪಶ್ಚಿಮ ಟೆಕ್ಸಾಸ್'ನ ಉಡಾವಣಾ ತಾಣ ಒನ್'ನಿಂದ ಉಡಾವಣೆಗೊಂಡಿದೆ. ಕ್ಯಾಪ್ಸೂಲ್ ಮರುಭೂಮಿಯಲ್ಲಿ ಪ್ಯಾರಾಚೂಟ್ ಲ್ಯಾಂಡಿಂಗ್ ಮಾಡುವ ಮೂಲಕ ಕೇವಲ 10 ನಿಮಿಷಗಳ ಕಾಲ ನಡೆದಿದೆ. * ಪ್ರಸ್ತುತ ಬಾಹ್ಯಾಕಾಶ ನೌಕೆಯು ಮ್ಯಾಕ್ 3ರ ಗರಿಷ್ಠ ವೇಗವನ್ನು ತಲುಪಿದೆ, ವಿಮಾನ ಹಾರಾಟದ '03' ನಿಮಿಷಗಳ ನಂತರ, ನ್ಯೂ ಶೆಪರ್ಡ್ ಬೂಸ್ಟರ್'ನಿಂದ ಬೇರೆಯಾಗಿ ಪ್ರಯಾಣಿಕರು ತಮ್ಮ ಆಸನಗಳಿಂದ ಬೇರ್ಪಡುತ್ತಿದ್ದಂತೆ ಶೂನ್ಯ ಗುರುತ್ವಾಕರ್ಷಣೆ ಹಾಗೂ ತೂಕ ರಹಿತತೆಯನ್ನ ಅನುಭವಿಸಲು ಆರಂಭಿಸಿದರು. ನಂತರ '04' ನಿಮಿಷಗಳಲ್ಲಿ, ನ್ಯೂ ಶೆಪರ್ಡ್ ಕರ್ಮನ್ ರೇಖೆಯನ್ನ ದಾಟಿ ಬಾಹ್ಯಾಕಾಶದ ಪ್ರವೇಶವನ್ನು ಪಡೆದರು. * ಬ್ಲೂ ಒರಿಜಿನ್ ಇದೊಂದು LLC ಯು ಅಮೆರಿಕದ ಖಾಸಗಿ ಅನುದಾನಿತ ಏರೋಸ್ಪೇಸ್ ತಯಾರಕ ಹಾಗೂ ಉಪ-ಕಕ್ಷೆಯ ಬಾಹ್ಯಾಕಾಶ ಹಾರಾಟ ಸೇವೆಗಳ ಕಂಪನಿಯಾಗಿದೆ. ಈ ಬ್ಲೂ ಒರಿಜಿನ್ ಕೆಂಟ್ ವಾಷಿಂಗ್ಟನ್‌ನಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಅಮೆಜಾನ್‌ನ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷರಾದ ಜೆಫ್ ಬೆಜೋಸ್ ಅವರು ಇದನ್ನು 2000 ರಲ್ಲಿ ಸ್ಥಾಪನೆ ಮಾಡಿದ್ದಾರೆ. ಪ್ರಸ್ತುತ ಈ ಕಂಪನಿಯು CEO ಬಾಬ್ ಸ್ಮಿತ್ ಅವರ ನೇತೃತ್ವದಲ್ಲಿದೆ ಮುನ್ನಡೆಯುತ್ತಿದೆ. * ಈ ಕಂಪನಿಯು ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಗಳ ಮೂಲಕ ಬಾಹ್ಯಾಕಾಶವನ್ನು ಅಗ್ಗವಾಗಿ ಹಾಗೂ ಹೆಚ್ಚು ವಿಶ್ವಾಸಾರ್ಹವಾಗಿಸುವ ಗುರಿಯನ್ನು ಹೊಂದಿದೆ. ಈ ಹಿಂದೆ 2003 ರಿಂದ 2017 ರವರೆಗೆ ರಾಬ್ ಮೆಯೆರ್ಸನ್ ಬ್ಲೂ ಒರಿಜಿನ್ ಕಂಪನಿಯನ್ನು ಮುನ್ನಡೆಸಿದ್ದಾರೆ, ಹಾಗೂ ಇವರೇ ಈ ಕಂಪನಿಯ ಮೊದಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.