Job Description: * ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಉಷಾ ಬಿ.ಎನ್ ಅವರಿಗೆ ಒರಿಸ್ಸಾದ ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಲಭಿಸಿದೆ. * ಇದೀಗ ಉಷಾ ಅವರು ಇದೇ ಎಪ್ರಿಲ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಜರುಗುವ ಕಾಮನ್ವೆಲ್ತ್ ಗೇಮ್ಸ್‌'ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. * ಪ್ರಸ್ತುತ ಉಷಾ ಬಿ.ಎನ್ ಅವರು ಇಂಡಿಯನ್ ರೈಲ್ವೇಸ್‌ನ ಉದ್ಯೋಗಿಯಾಗಿದ್ದಾರೆ. * ಈ ಚಾಂಪಿಯನ್‌ಶಿಪ್‌ನಲ್ಲಿ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 1300 ಕ್ಕೂ ಅಧಿಕ ಕ್ರೀಡಾಪಟುಗಳು, ಸಹಾಯಕ ಸಿಬ್ಬಂದಿ ಹಾಗೂ ತಾಂತ್ರಿಕ ಅಧಿಕಾರಿಗಳು ಭಾಗವಹಿಸಿದ್ದರು. * ಒಡಿಶಾ ಅನೇಕ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಈವೆಂಟ್‌ಗಳನ್ನು ಆಯೋಜಿಸುತ್ತಿದೆ ಹಾಗೂ ಈ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್'ನ್ನು ಆಯೋಜಿಸಿದೆ. * ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ಈ ಹಿಂದೆ ಮಾರ್ಚ್ 20 ರಂದು ಅಂತರರಾಷ್ಟ್ರೀಯ ವರ್ಗ - I & II ಮತ್ತು ರಾಷ್ಟ್ರೀಯ ವರ್ಗ - I ಮತ್ತು II ರೆಫರಿ ಪರೀಕ್ಷೆಯನ್ನು ನಡೆಸಿದೆ.