Job Description: * ಇಂಡಿಯನ್ ಎಕ್ಸ್‌ಪ್ರೆಸ್ ಪವರ್ ಲಿಸ್ಟ್ 2022 ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. * ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಅನೇಕ ಮಹತ್ವದ ಕಾರ್ಯಗಳನ್ನು ಮಾಡಿದ್ದಾರೆ, ಇತ್ತೀಚಿಗೆ ಯುದ್ಧ ಪೀಡಿತ ದೇಶ ಉಕ್ರೇನ್‌ನಿಂದ 22,000 ಕ್ಕೂ ಅಧಿಕ ಯುವ ಭಾರತೀಯರ ಏರ್‌ಲಿಫ್ಟ್ ಮಾಡಿದ್ದಾರೆ. * ಪ್ರಧಾನಿ ಮೋದಿ ನಂತರದ ಸ್ಥಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ 2ನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ಅವರಿದ್ದಾರೆ. ಜೆಪಿ ನಡ್ಡಾ ಅವರು 4ನೇ ಸ್ಥಾನದಲ್ಲಿದ್ದಾರೆ. ಇವರ ನಂತರ ಭಾರತೀಯ ಉದ್ಯಮಿ ಮುಖೇಶ್ ಅಂಬಾನಿ 5ನೇ ಸ್ಥಾನದಲ್ಲಿದ್ದಾರೆ. * ಅತ್ಯಂತ ಶಕ್ತಿಶಾಲಿ ಭಾರತೀಯರ ಇಂಡಿಯನ್ ಎಕ್ಸ್‌ಪ್ರೆಸ್ ಪಟ್ಟಿಯು ಮನರಂಜನಾ ಉದ್ಯಮ ಹಾಗೂ ಕ್ರೀಡಾ ಭ್ರಾತೃತ್ವದ ವ್ಯಕ್ತಿಗಳನ್ನು ಒಳಗೊಂಡಿದೆ. 50 ನೇ ಸ್ಥಾನದಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಹಾಗೂ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿದ್ದಾರೆ. ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಸ್ಥಾನಪಡೆದುಕೊಂಡಿದ್ದಾರೆ. * ಇಂಡಿಯನ್ ಎಕ್ಸ್‌ಪ್ರೆಸ್ ಲಿಮಿಟೆಡ್ ಭಾರತೀಯ ಸುದ್ದಿ ಮಾಧ್ಯಮ ಕಂಪನಿಯಾಗಿದೆ. ಇದು ಇಂಗ್ಲಿಷ್‌ನಲ್ಲಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ಹಾಗೂ ದಿ ಫೈನಾನ್ಶಿಯಲ್ ಎಕ್ಸ್‌ಪ್ರೆಸ್, ಮರಾಠಿಯಲ್ಲಿ ಲೋಕಸತ್ತಾ ಹಾಗೆಯೇ ಹಿಂದಿಯಲ್ಲಿ ಜನಸತ್ತಾ ಸೇರಿದಂತೆ ಹಲವಾರು ವ್ಯಾಪಕವಾಗಿ ಪ್ರಸಾರವಾದ ದಿನಪತ್ರಿಕೆಗಳನ್ನು ಪ್ರಕಟಿಸುತ್ತಾ ಬಂದಿದೆ. * ಈ ಹಿಂದೆ 2006 ರ ನವೆಂಬರ್. 02 ರಂದು, ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ದಿ ಎಕನಾಮಿಸ್ಟ್‌ನೊಂದಿಗೆ ಪ್ರಿಂಟ್ ಸಿಂಡಿಕೇಶನ್ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಅಡಿಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್ ಸಮೀಕ್ಷೆಗಳು, ಹಾಗೂ ಅನೇಕ ವರದಿಗಳ ಜೊತೆಗೆ ದಿ ಎಕನಾಮಿಸ್ಟ್ ನಿಯತಕಾಲಿಕದಲ್ಲಿ ಪ್ರಕಟವಾಗುವ ಅನೇಕ ವಿಷಯಗಳನ್ನು ಪ್ರಕಟಿಸಲು ಅವಕಾಶವನ್ನು ನೀಡಿದೆ.