Job Description: * ಈ ಹಿಂದೆ 2020ರಲ್ಲಿ ಛತ್ತೀಸಗಢ ಸರ್ಕಾರವು ಗೋಧನ್ ನ್ಯಾಯ್ ಯೋಜನೆಯ ಮೂಲಕ ರೈತರಿಂದ ದನದ ಸಗಣಿಯನ್ನು ಖರೀದಿಸುವ ಯೋಜನೆಯನ್ನು ಜಾರಿಗೊಳಿಸಿತ್ತು. ಇದೀಗ ಆ ಯೋಜನೆಯನ್ನು ವಿಸ್ತರಿಸಿ ರೈತರಿಂದ ದನದ ಸಗಣಿಯ ಖರೀದಿ ಜೊತೆಗೆ ಗೋಮೂತ್ರವನ್ನು ಖರೀದಿಸುವದಾಗಿ ತಿಳಿಸಿದೆ. * ಈ ವಿಷಯವಾಗಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ ಹಾಗೂ ಇದಕ್ಕಾಗಿ ತಾಂತ್ರಿಕ ಸಮಿತಿ ರಚಿಸಲಾಗುವುದು ಎಂದು ತಿಳಿಸಿದ್ದಾರೆ. ಪ್ರಸ್ತುತ ಇಂದಿರಾ ಗಾಂಧಿ ಕೃಷಿ ವಿವಿ ಹಾಗೂ ಕಾಮಧೇನು ವಿವಿಯ ತಜ್ಞರು ಕೂಡ ಈ ಸಮಿತಿಯಲ್ಲಿ ಇರಲಿದ್ದಾರೆ, ಈ ಸಮಿತಿ ತನ್ನ ವರದಿಯನ್ನು 15 ದಿನಗಳಲ್ಲಿ ನೀಡಲಿದೆ. * ಪ್ರಸ್ತುತ ಗೋಮೂತ್ರ ಸಂಗ್ರಹ, ಗುಣಮಟ್ಟ ಪರೀಕ್ಷೆ ಹಾಗೂ ಅದರಿಂದ ಸಿದ್ದ ಪಡಿಸಬಹುದಾದ ಉತ್ಪನ್ನಗಳ ಕುರಿತು ಸಮಿತಿ ಅಧ್ಯಯನವನ್ನು ಕೈಗೊಳ್ಳಲಿದೆ ಎಂದಿದ್ದಾರೆ. ಸಂಗ್ರಹಿಸಿದ ಗೋಮೂತ್ರದಿಂದ ಸಾವಯವ ರಸಗೊಬ್ಬರ, ಬಯೋ ಎನ್‍ಝೈಮ್‍ಗಳನ್ನು ಯಾವ ರೀತಿ ಸಿದ್ದ ಪಡಿಸಬಹುದು ಎಂದು ಸಮಿತಿಯು ಚರ್ಚಿಸಲಿದೆ ಎಂದಿದ್ದಾರೆ. * ಸಗಣಿ ಖರೀದಿಸುವ ರೀತಿಯಲ್ಲಿಯೇ ಗೋಮೂತ್ರವನ್ನು ಗ್ರಾಮ್ ಗೌಥನ್ ಸಮಿತಿ ಮೂಲಕ ಖರೀದಿಸಲಾಗುತ್ತದೆ ಹಾಗೂ '15' ದಿನಗಳಿಗೊಮ್ಮೆ ರೈತರಿಗೆ ಹಣ ಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಛತ್ತೀಸಗಢ ಸರ್ಕಾರವು ಗೋಧನ್ ನ್ಯಾಯ್ ಯೋಜನೆಯ ಮೂಲಕ ಸರಕಾರವು ರೈತರಿಂದ ಕೆಜಿಗೆ 1.50 ರೂಗಳಂತೆ ಸಗಣಿಯನ್ನು ಖರೀದಿಸುತ್ತಿದೆ. * ಛತ್ತೀಸ್‌ಗಢ ರಾಜ್ಯ ಸರ್ಕಾರವು ಗೋಧನ್ ನ್ಯಾಯ್ ಯೋಜನೆಯ ಅಡಿಯಲ್ಲಿ ರೈತರಿಂದ ಜಾನುವಾರು-ಸಗಣಿಯನ್ನು ಖರೀದಿಸಿ ನಂತರ ಅದನ್ನು ವರ್ಮಿಕಾಂಪೋಸ್ಟ್ ಆಗಿ ಪರಿವರ್ತಿಸಿ ಸಾವಯವ ಕೃಷಿಯನ್ನು ಉತ್ತೇಜಿಸಲು ರೈತರಿಗೆ ಮಾರಾಟ ಮಾಡುತ್ತದೆ.