Job Description: * ಭಾರತ ಸರ್ಕಾರವು ಮುಂದಿನ ಹಣಕಾಸು ವರ್ಷದಲ್ಲಿ 100 ಟನ್ ನೈಸರ್ಗಿಕ ಯುರೇನಿಯಂ ಆಮದು ಮಾಡಿಕೊಳ್ಳಲಿದೆ ಎಂದು ತಿಳಿಸಿದೆ. * ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ತಿಳಿಸಿರುವ ಪ್ರಕಾರ 2022-23ನೇ ಸಾಲಿನಲ್ಲಿ ಭಾರತವು 100 ಟನ್ ನೈಸರ್ಗಿಕ ಯುರೇನಿಯಂ'ನ್ನು, ಯುರೇನಿಯಂ ಅದಿರಿನ ರೂಪದಲ್ಲಿ ಆಮದು ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. * ಭಾರತ ಸರ್ಕಾರವು ರಷ್ಯಾ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ, ಕೂಡಕೂಳಂನಲ್ಲಿರುವ ರಷ್ಯಾದ ರಿಯಾಕ್ಟರ್‌ಗಳಿಗೆ ಇಂಧನ ಪೂರೈಕೆಗಾಗಿ ಸಮ್ಮತಿಯನ್ನು ನೀಡಿದೆ ಎಂದು ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೆಯೇ ಯುರೇನಿಯಂ ಖರೀದಿಯ ಸಲುವಾಗಿ ಕೆನಡಾ, ಕಜಕಿಸ್ತಾನ, ರಷ್ಯಾ ಹಾಗೂ ಉಜ್ಬೇಕಿಸ್ತಾನ ರಾಷ್ಟ್ರಗಳ ಜೊತೆಗೆ ಭಾರತ ಒಪ್ಪಂದ ಮಾಡಿಕೊಂಡಿದೆ * ಪ್ರಸ್ತುತ 2021-22ನೇ ಸಾಲಿನಲ್ಲಿ ಭಾರತಕ್ಕೆ ಯಾವುದೇ ರೀತಿಯ ಅಣು ಇಂಧನ ಆಮದಾಗಿಲ್ಲ. * 21ನೇ ಹಣಕಾಸು ವರ್ಷದಲ್ಲಿ ಕಜಕಿಸ್ತಾನದಿಂದ 999.82 ಟನ್ ನೈಸರ್ಗಿಕ ಯುರೇನಿಯಂ ಅದಿರನ್ನು ಸುಮಾರು 572.44 ಕೋಟಿ ರೂ. ವೆಚ್ಚದಲ್ಲಿ ಹಾಗೂ ಕೆನಡಾ ದೇಶದಿಂದ 1000.479 ಟನ್ ಅದಿರನ್ನು ಸುಅಮರು 618.95 ಕೋಟಿ ರೂ. ವೆಚ್ಚದಲ್ಲಿ ಆಮದು ಮಾಡಿಕೊಂಡಿದೆ ಎಂದು ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. * ಯುರೇನಿಯಂ ಒಂದು ಸಾಂಕೇತಿಕ U ಹಾಗೂ ರಾಸಾಯನಿಕ ಅಂಶದೊಂದಿಗೆ ಪರಮಾಣು ಸಂಖ್ಯೆ 92. ಇದು ಬೆಳ್ಳಿಯ-ಬೂದು ಲೋಹದ ಆಕ್ಟಿನೈಡ್ ಸರಣಿಯ ಆವರ್ತಕ ಕೋಷ್ಟಕವಾಗಿದೆ. ಯುರೇನಿಯಂ ಪರಮಾಣು 92 ಪ್ರೋಟಾನ್‌ಗಳು ಹಾಗೂ 92 ಎಲೆಕ್ಟ್ರಾನ್‌ಗಳನ್ನು ಹೊಂದಿದೆ. ಯುರೇನಿಯಂನ ಎಲ್ಲಾ ಐಸೊಟೋಪ್‌ಗಳು ಅಸ್ಥಿರವಾಗಿರುವ ಹಿನ್ನಲೆಯಿಂದಾಗಿ ಯುರೇನಿಯಂ ದುರ್ಬಲವಾಗಿ ವಿಕಿರಣಶೀಲವಾಗಿದೆ. * ಪ್ರಕೃತಿಯಲ್ಲಿ, ಯುರೇನಿಯಂ ಯುರೇನಿಯಂ-238, ಯುರೇನಿಯಂ-235 ಮತ್ತು ಯುರೇನಿಯಂ-234 ಅತ್ಯಲ್ಪ ಪ್ರಮಾಣದಲ್ಲಿ ಕಂಡುಬರುತ್ತದೆ. ಯುರೇನಿಯಂ ನಿಧಾನವಾಗಿ ಆಲ್ಫಾ ಕಣವನ್ನು ಹೊರಸೂಸುತ್ತಾ ಕೊಳೆಯುತ್ತದೆ.