Job Description: * ಇತ್ತೀಚಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಸಾಕ್ಷ್ಯಚಿತ್ರ ಹಾಗೂ ಕಿರುಚಿತ್ರಗಳ ನಿರ್ಮಾಣ, ಚಲನಚಿತ್ರೋತ್ಸವಗಳ ಆಯೋಜನೆ ಹಾಗೂ ಚಲನಚಿತ್ರಗಳ ಸಂರಕ್ಷಣೆಯನ್ನು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ PSU ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮಕ್ಕೆ (NFDC) ವಿಲೀನಗೊಳಿಸಲು ಆದೇಶಿಸಿದೆ. * ಇದೀಗ ಸಚಿವಾಲಯ ಹೇಳಿಕೆ ನೀಡಿರುವ ಪ್ರಕಾರ ಈ ಎಲ್ಲಾ ಚಟುವಟಿಕೆಗಳನ್ನು ಒಂದೇ ನಿರ್ವಹಣೆಯ ಅಡಿಯಲ್ಲಿ ತರುವುದರಿಂದ ಅನೇಕ ಚಟುವಟಿಕೆಗಳ ಅತಿಕ್ರಮಣವನ್ನು ಕಡಿಮೆ ಮಾಡಲಾಗುತ್ತದೆ ಹಾಗೂ ಸಾರ್ವಜನಿಕ ಸಂಪನ್ಮೂಲಗಳ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದಿದ್ದಾರೆ. * 2020 ರ ಡಿಸೆಂಬರ್'ನಲ್ಲಿ '04' ಸಾರ್ವಜನಿಕ ಸಂಸ್ಥೆಗಳನ್ನು 'ನಷ್ಟ ಮಾಡುವ' ಸಾರ್ವಜನಿಕ ವಲಯದ ಉದ್ಯಮವಾದ NFDC ಯೊಂದಿಗೆ ವಿಲೀನಗೊಳಿಸಲು ಮಾಜಿ ಸಚಿವ ಪ್ರಕಾಶ್ ಜಾವಡೇಕರ್ ಅವರು ಆದೇಶಿಸಿದ್ದರು. * ಇದೀಗ ಚಿತ್ರಗಳ ನಿರ್ಮಾಣದ ಆದೇಶವನ್ನು ಈಗಾಗಲೇ NFDC ನಡೆಸುತ್ತಿದೆ. ಅನೇಕ ಅಂತರರಾಷ್ಟ್ರೀಯ ಉತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಹಾಗೂ ಅನೇಕ ದೇಶೀಯ ಉತ್ಸವಗಳನ್ನು ಆಯೋಜಿಸುವದರಿಂದ ಚಲನಚಿತ್ರದ ವಿಷಯದ ಸಂರಕ್ಷಣೆ, ಡಿಜಿಟಲೀಕರಣ ಹಾಗೂ ಚಲನಚಿತ್ರಗಳ ಮರುಸ್ಥಾಪನೆ, ತದನಂತರದ ಈ ಘಟಕಗಳ ಜೊತೆಗೆ ಲಭ್ಯವಿರುವ ಆಸ್ತಿಗಳ ಮಾಲೀಕತ್ವವು ಭಾರತ ಸರ್ಕಾರದ ಅಧೀನದಲ್ಲಿ ಉಳಿಯುಲಿದೆ ಎಂದು ಸಚಿವಾಲಯ ಹೇಳಿಕೆ ನೀಡಿದೆ. * ಇದೀಗ ಸಚಿವಾಲವು ಹೊರಡಿಸಿರುವ ಆದೇಶದ ಪ್ರಕಾರ ಚಲನಚಿತ್ರ ವಿಭಾಗವು ಈ ಹಿಂದೆ ಮಾಡಲಾಗಿದ್ದ ಸಾಕ್ಷ್ಯಚಿತ್ರಗಳ ನಿರ್ಮಾಣದ ಆದೇಶವನ್ನು ಸಂಪೂರ್ಣವಾಗಿ NFDC ಗೆ ವರ್ಗಾಯಿಸಲಾಗಿದೆ. NFDC ನಲ್ಲಿ ಸಾಕ್ಷ್ಯಚಿತ್ರಗಳ ನಿರ್ಮಾಣಕ್ಕಾಗಿ 'ಫಿಲ್ಮ್ಸ್ ಡಿವಿಷನ್' ಎಂದು ಹೆಸರಿಸಲಾಗುತ್ತದೆ ಎಂದು ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ. * ಈ ಹಿಂದೆ 1975 ರಲ್ಲಿ ಮುಂಬೈ ಮೂಲದ ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NFDC) ಸ್ಥಾಪನೆ ಮಾಡಿರುವ ಕೇಂದ್ರೀಯ ಸಂಸ್ಥೆಯಾಗಿದೆ, ಈ ಸಂಸ್ಥೆಯು ಉತ್ತಮ ಹಾಗೂ ಒಳ್ಳೆಯ ಮಾಹಿತಿಯನ್ನು ಒಳಗೊಂಡಿರುವ ಭಾರತೀಯ ಸಿನಿಮಾವನ್ನು ಪ್ರೋತ್ಸಾಹಿಸುತ್ತದೆ. NFDC ಯ ಪ್ರಾಥಮಿಕ ಗುರಿಯು ಭಾರತೀಯ ಚಲನಚಿತ್ರೋದ್ಯಮದ ಸಮಗ್ರ ಹಾಗೂ ಸಮರ್ಥ ಅಭಿವೃದ್ಧಿಯನ್ನು ನಿಯೋಜಿಸುವದು, ಹಾಗೂ ಅದ್ದಕ್ಕೆ ಉತ್ತೇಜನ ನೀಡುವುದು ಹಾಗೂ ಸಿನಿಮಾದಲ್ಲಿ ಉತ್ಕೃಷ್ಟತೆಯನ್ನು ಬೆಳೆಸುವುದು ಈ ಸಂಸ್ಥೆಯ ಪ್ರಮುಖ ಕಾರ್ಯವಾಗಿದೆ.