Job Description: * ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಇತ್ತೀಚಿಗೆ 500 ಹವಾ ನಿಯಂತ್ರಿತ (AC) 'ತಾಯಿ-ಮಗು ಎಕ್ಸ್‌ಪ್ರೆಸ್‌' ವಾಹನಗಳಿಗೆ ಚಾಲನೆ ನೀಡಿದ್ದಾರೆ. * ಈ 'ತಾಯಿ-ಮಗು ಎಕ್ಸ್‌ಪ್ರೆಸ್‌' ವಾಹನಗಳ ಮೂಲಕ ಗರ್ಭಿಣಿ ಮಹಿಳೆಯರು, ತಾಯಿ- ಮಗುವನ್ನು ಮನೆಯಿಂದ ಆಸ್ಪತ್ರೆಗೆ ಉಚಿತವಾಗಿ ಕರೆದೊಯ್ಯಲು ಈ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು AP ಸರ್ಕಾರದ ಮೂಲಗಳು ಈ ಬಗ್ಗೆ ಮಾಹಿತಿ ನೀಡಿವೆ. * ಇದೀಗ ಜಗನ್ ಮೋಹನ್ ರೆಡ್ಡಿ ಅವರ ಆಂಧ್ರ ಸರ್ಕಾರವು ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆಗಳನ್ನು ಕಲ್ಪಿಸಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. * ಸರ್ಕಾರದ ವತಿಯಿಂದ 'ಆರೋಗ್ಯ ಆಸರೆ' ಯೋಜನೆಯಡಿಯಲ್ಲಿ ಸಿಸೇರಿಯನ್ ಹೆರಿಗೆಗೆ 3000 ರೂ. ಹಾಗೂ ಸಾಮಾನ್ಯ ಹೆರಿಗೆಗೆ 5,000 ರೂ. ಸಹಾಯಧನ ನೀಡಲಾಗುವುದು. ಜತೆಗೆ, ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಮಾಣೀಕೃತ ಔಷಧಗಳ ಜೊತೆಗೆ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಜಗನ್‌ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.